ಬೆಂಗಳೂರು: ಬೆಂಗಳೂರು ದಕ್ಷಿಣ ಜಿಲ್ಲೆಯ ರಾಚನಮಡು ಗ್ರಾಮದ ವೆಂಕಟಪ್ಪ (72) ಎಂಬುವವರು ಶನಿವಾರ ಸಂಜೆ ನಿಗೂಢವಾಗಿ ನಾಪತ್ತೆಯಾಗಿದ್ದು, ಅವರ ಪತ್ತೆಗೆ ಕುಟುಂಬಸ್ಥರು ಹಾಗೂ ಪೊಲೀಸರು ಮನವಿ ಮಾಡಿದ್ದ. ಬೆಳಗ್ಗೆ ಮೆಡಿಕಲ್ ಶಾಪ್ನಿಂದ ಔಷಧ ತಂದು ಸೇವಿಸಿ ವಿಶ್ರಾಂತಿ ಪಡೆದಿದ್ದರು. ಸಂಜೆ 5 ಗಂಟೆಗೆ ಮನೆಯಿಂದ ಹೋದವರು ವಾಪಾಸಾಗಿಲ್ಲ. ಈ ಸಂಬಂಧ ಕಗ್ಗಲೀಪುರ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ವೆಂಕಟಪ್ಪ ಅವರ ಸುಳಿವು ಸಿಕ್ಕಲ್ಲಿ ಕೂಡಲೇ 8073201972 ಸಂಪರ್ಕಿಸುವಂತೆ ಮನವಿ ಮಾಡಲಾಗಿದೆ.