ಟೆಹ್ರಾನ್: ಮಧ್ಯಪ್ರಾಚ್ಯದಲ್ಲಿ ಮತ್ತೆ ಮಹಾಯುದ್ಧದ ಕಾರ್ಮೋಡ ದಟ್ಟವಾಗುತ್ತಿದೆ. ಇರಾನ್ ಮತ್ತು ಇಸ್ರೇಲ್-ಅಮೆರಿಕ ನಡುವಿನ ವೈರತ್ವ ಈಗ ತುತ್ತತುದಿಗೆ ತಲುಪಿದ್ದು, ಇರಾನ್ನ ಸರ್ವೋಚ್ಚ ನಾಯಕ ಮೊಜ್. ಯಾವುದೇ ಕ್ಷಣದಲ್ಲಾದರೂ ಯುದ್ಧ ಎದುರಾಗಬಹುದು, ಸಣ್ಣ ತಪ್ಪಿಗೂ ಶತ್ರುಗಳಿಗೆ ನಡುಕ ಹುಟ್ಟಿಸುವಂತೆ ಹೊಡೆಯಿರಿ ಎಂದು ಖಮೇನಿ ತಮ್ಮ ಸೇನೆಗೆ ನಿರ್ದೇಶನ ನೀಡಿದ್ದಾರೆ. ಅಮೆರಿಕ ಅಥವಾ ಇಸ್ರೇಲ್ ಏನಾದರೂ ಇನ್ನೊಂದು ಸಾಹಸಕ್ಕೆ ಕೈಹಾಕಿದರೆ, ಮುಂದೆ ನಡೆಯುವ ರಣಾಂಗಣದ ನಿಯಮಗಳು ಮತ್ತು ಷರತ್ತುಗಳನ್ನು ನಾವೇ ನಿರ್ಧರಿಸುತ್ತೇವೆ ಎಂದು ಟೆಹ್ರಾನ್ ಗುಡುಗಿದೆ..ಖಮೇನಿ ಕೊಟ್ಟ ಮಹತ್ವದ ಸೂಚನೆಗಳೇನು?ವರದಿಗಳ ಪ್ರಕಾರ, ಖಮೇನಿ ತಮ್ಮ ಸಶಸ್ತ್ರ ಪಡೆಗಳಿಗೆ ಸಾಮಾನ್ಯ ಎಚ್ಚರಿಕೆಯನ್ನಷ್ಟೇ ನೀಡಿಲ್ಲ; ನೇರವಾಗಿ ಯುದ್ಧದ ಸಿದ್ಧತೆಗೆ ಇಳಿಯಲು ಹೇಳಿದ್ದಾರೆ.