ಲಂಡನ್ನಲ್ಲಿ ಎಂಬಿಎ ಓದುತ್ತಿದ್ದಾಳೆ ಎಂದು ಭಾವಿಸಿದ್ದ ಪೋಷಕರಿಗೆ ಮಗಳ ಸಾವಿನ ಸುದ್ದಿ ಆಘಾತ ತಂದಿದೆ. 34 ವರ್ಷದ ಮುಗ್ಧಾ ಅವಿನಾಶ್ ದೇಶಮುಖ್ ಲಂಡನ್ನಿಂದ ಯಾರಿಗೂ ತಿಳಿಸದೆ ಭಾರತಕ್ಕೆ ಮರಳಿ ಪುಣೆಯಲ್ಲಿ ವಾಸಿಸುತ್ತಿದ್ದರು. ಅಕ್ಟೋಬರ್ 24ರಿಂದ ಮೊಬೈಲ್ ಸ್ವಿಚ್ ಆಫ್ ಆಗಿದ್ದ ಹಿನ್ನೆಲೆಯಲ್ಲಿ ಪೋಷಕರು ಹುಡುಕಾಟ ನಡೆಸಿದಾಗ ಬ್ಯಾಂಕ್ ವಹಿವಾಟು ಮತ್ತು Swiggy, Zomato ಫುಡ್ ಆರ್ಡರ್ಗಳಿಂದ ಆಕೆ ಭಾರತದಲ್ಲಿರುವುದು ಪತ್ತೆಯಾಗಿದೆ. ಬಳಿಕ ಪುಣೆಯ ಫ್ಲ್ಯಾಟ್ನಲ್ಲಿ ಆಕೆಯ ಮೃತದೇಹ ಪತ್ತೆಯಾಗಿದ್ದು, ಸಾವಿನ ಕಾರಣದ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.