ಹಿಂದಿಯಲ್ಲಿ ಹಲವಾರು ಸಿನಿಮಾಗಳನ್ನು ಪ್ರತಿ ವರ್ಷ ನಿರ್ಮಾಣ ಮಾಡಲಾಗುತ್ತದೆ. ಅದರಲ್ಲೂ ಹಲವು ನಿಜವಾದ ಸೈನ್ಯದ ಆಪರೇಷನ್ಗಳು, ಕದನಗಳು, ಯುದ್ಧಗಳ ಕುರಿತಾಗಿ ಸಿನಿಮಾಗಳನ್ನು ನಿರ್ಮಿಸಲಾಗಿದೆ. ಇದೀಗ ಇಂಥಹುದೇ ಒಂದು ಪ್ರಯತ್ನ ಕನ್ನಡದಲ್ಲೂ ಆಗುತ್ತಿದೆ. ವಿಶೇಷವೆಂದರೆ ಸೈನ್ಯದ ಹೋರಾಟದ ಬಗ್ಗೆ ಕನ್ನಡ ಮತ್ತು ಹಿಂದಿಯಲ್ಲಿ ಏಕಕಾಲಕ್ಕೆ ಸಿನಿಮಾ ನಿರ್ಮಾಣ ಆಗಲಿದೆ. ದಕ್ಷಿಣ ಭಾರತ ಚಿತ್ರರಂಗದಲ್ಲಿ ಸೈನ್ಯದ ಸಾಹಸಗಳ ಕುರಿತಾಗಿ, ಯುದ್ಧಗಳ ಕುರಿತಾಗಿ ಸಿನಿಮಾಗಳು ನಿರ್ಮಾಣ ಆಗುವುದು ಬಹಳ ಅಪರೂಪ. ಆದರೆ ಹಿಂದಿಯಲ್ಲಿ ಹಲವಾರು ಸಿನಿಮಾಗಳನ್ನು ಪ್ರತಿ ವರ್ಷ ನಿರ್ಮಾಣ ಮಾಡಲಾಗುತ್ತದೆ. 1971 ರ ಭಾರತ-ಪಾಕಿಸ್ತಾನ ಯುದ್ಧದ ಭಾಗವಾಗಿರುವ ಭೀಕರ ಗಂಗಾಸಾಗರ ಕದನದ ಕುರಿತಾದ ಸಿನಿಮಾ ಅನ್ನು ತೆರೆಗೆ ತರಲಾಗುತ್ತಿದೆ.