ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆಯನ್ನು ಎಸ್ಐಟಿ ಚುರುಕುಗೊಳಿಸಿದೆ. ಶವ ಪತ್ತೆಯಾದ ಸ್ಥಳಕ್ಕೆ ಭೇಟಿ ನೀಡಿ, ಅಪರಾಧ ಸ್ಥಳವನ್ನು ಮರುಸೃಷ್ಟಿಸಲಾಗುತ್ತಿದೆ. ಸಿಬಿಐ ಮಾಡಿದ ಲೋಪಗಳನ್ನು ಪುನರಾವರ್ತಿಸದೆ, ಪ್ರಾಮಾಣಿಕವಾಗಿ ಹಾಗೂ ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ, ಸಂತ್ರಸ್ತೆಗೆ ನ್ಯಾಯ ಒದಗಿಸಲು ಎಸ್ಐಟಿ ನಿರ್ಧರಿಸಿದೆ. ದಕ್ಷಿಣ ಕನ್ನಡ, ಅಕ್ಟೋಬರ್ 31: ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆಯನ್ನು ವಿಶೇಷ ತನಿಖಾ ತಂಡ (ಎಸ್ಐಟಿ) ಚುರುಕುಗೊಳಿಸಿದೆ. ಇವತ್ತು ಎಸ್ಐಟಿ ತಂಡವು ಸೌಜನ್ಯ ಅವರ ಶವ ಪತ್ತೆಯಾದ ಬೆಳ್ತಂಗಡಿ, ಉಜಿರೆ ಸಮೀಪದ ನೇತ್ರಾವತಿ ನದಿ ದಡದ ಸ್ಥಳಕ್ಕೆ ಭೇಟಿ ನೀಡಿದೆ. ಇಲ್ಲಿ ಅಪರಾಧ ಸ್ಥಳವನ್ನು (ಕ್ರೈಮ್ ಸೀನ್) ಮರುಸೃಷ್ಟಿಸುವ ಮಹತ್ವದ ಕಾರ್ಯಕ್ಕೆ ಎಸ್ಐಟಿ ಮುಂದಾಗಿದೆ.