ದಕ್ಷಿಣ ಭಾರತದ ಸಾಲು ಸಾಲು ಸಿನಿಮಾಗಳ ಬ್ಯುಸಿ ಷೆಡ್ಯೂಲ್ನಿಂದಾಗಿ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಶಾರುಖ್ ಖಾನ್ ಅಭಿನಯದ ಮುಂಬರುವ. ಬಾಲಿವುಡ್ ಬಾದ್ಷಾ ಶಾರುಖ್ ಖಾನ್ ಅಭಿನಯದ ಮುಂಬರುವ 'ಕಿಂಗ್' ಚಿತ್ರದಿಂದ ಪ್ರಸಿದ್ಧ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಹೊರಬಂದಿದ್ದಾರೆ. ಮದುವೆ ಕಾರಣಕ್ಕೆ ಅವರು ಹೊರ ಬಂದಿದ್ದಾರೆ ಎನ್ನಲಾಗಿತ್ತು. ದಕ್ಷಿಣ ಭಾರತದ ಸಾಲು ಸಾಲು ಸಿನಿಮಾಗಳ ಕೆಲಸದಲ್ಲಿದ್ದ ಅನಿರುದ್ಧ್, ಸಮಯದ ಅಭಾವದಿಂದ ಈ ನಿರ್ಧಾರ ತಳೆದಿದ್ದಾರೆ. ಕೊನೆಯ ಕ್ಷಣದವರೆಗೂ ತಂಡದ ಜೊತೆ ಚರ್ಚಿಸಿ ಅವರು ಈ ನಿರ್ಧಾರಕ್ಕೆ ಬಂದಿದ್ದಾರೆ. ಸದ್ಯಕ್ಕೆ ಈ ಸುದ್ದಿ ಶಾರುಖ್ ಖಾನ್ ಹಾಗೂ ಅನಿರುದ್ಧ್ ಅಭಿಮಾನಿಗಳಿಗೆ ತೀವ್ರ ನಿರಾಸೆ ಮೂಡಿಸಿದೆ.