ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ರಾಜಕಾರಣಿ ಕಾಗೋಡು ತಿಮ್ಮಪ್ಪ ಅವರಿಗೆ ಸಿಎಂ ಡಿಕೆ ಶಿವಕುಮಾರ್ ವೀಡಿಯೋ ಕರೆ ಮಾಡಿ ಅಭಿನಂದಿಸಿದರು. ಆರೋಗ್ಯ ವಿಚಾರಿಸಿದ ಸಿಎಂ, ನಿಮ್ಮ ಆಡಳಿತ ನೋಡುವ ಸೌಭಾಗ್ಯ ನನಗಿಲ್ಲ ಎಂದ ತಿಮ್ಮಪ್ಪ ಅವರಿಗೆ ಹೆಲಿಕಾಪ್ಟರ್ ಕಳುಹಿಸುವ ಆಫರ್ ನೀಡಿದರು. ತಿಮ್ಮಪ್ಪ ಅವರ ಮಾರ್ಗದರ್ಶನದಂತೆ ಸರ್ಕಾರ ನಡೆಯಲಿದೆ ಎಂದು ಡಿಕೆಶಿ ಭರವಸೆ ನೀಡಿದರು. ಶಿವಮೊಗ್ಗ, ಅಕ್ಟೋಬರ್ 31: ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಿಸಿರುವ ಹಿನ್ನೆಲೆ ಸಚಿವ ಮಧು ಬಂಗಾರಪ್ಪ ಸಾಗರದಲ್ಲಿರುವ ಅವರ ನಿವಾಸಕ್ಕೆ ತೆರಳಿ ಅಭಿನಂದಿಸಿದ್ದಾರೆ.