ಕಾರವಾರ: ಶಾಲೆ ಬಿಟ್ಟ ಬಗ್ಗೆ ತಂದೆ ಬೈದನೆಂದು ಮನೆ ಬಿಟ್ಟು ಹೋಗಿದ್ದ ಬಾಲಕನನ್ನು ಕದ್ರಾ ಪೊಲೀಸರು ಹುಡುಕಿ ಮನೆ ಸೇರಿಸಿದ್ದಾರೆ.ಬಾಲಕ ಓದಿನಲ್ಲಿ ಚುರುಕಾಗಿರಲಿಲ್ಲ. 8 ನೇ ತರಗತಿಯಲ್ಲೇ ಶಾಲೆ ಬಿಟ. ಮನೆಯಲ್ಲಿ ಕುಳಿತು ರೀಲ್ ನೋಡಬೇಡ, ಶಾಲೆಗೆ ಹೋಗು ಎಂದು ಬೈದಿದ್ದಕ್ಕೆ ಅಕ್ಟೋಬರ್ 5 ರಂದು ಮನೆಯಿಂದ ನಾಪತ್ತೆಯಾಗಿದ್ದ. ಅ.28 ರಂದು ಆತನನ್ನು ಬಾಗಲಕೋಟೆಯಲ್ಲಿ ಪತ್ತೆ ಮಾಡಲಾಗಿದೆ.ಬಾಲಕನ ಪತ್ತೆಗೆ ವಿಶೇಷ ತಂಡ ರಚಿಸಲಾಗಿತ್ತು. ಕದ್ರಾ ಪಿಎಸ್ಐ ಕೃಷ್ಣಕಾಂತ ಅಯ್ಯಪ್ಪ ಪಾಟೀಲ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ತಂಡ ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ಆಧರಿಸಿ ಮಂಗಳೂರು, ಹುಬ್ಬಳ್ಳಿ, ಯಲ್ಲಾಪುರ, ಅಂಕೋಲಾ, ಗೋವಾ ಹೀಗೆ ವಿವಿಧೆಡೆ ಹೋಗಿ ಹುಡುಕಾಟ ನಡೆಸಿತ್ತು.