ಇಸ್ತಾನ್ಬುಲ್: ಮದುವೆ ಅಂದ್ಮೇಲೆ ಫೋಟೋಶೂಟ್ ಎನ್ನವುದು ಮಾಮೂಲಿ. ‘ತನ್ನ ಮದುವೆ ಫೋಟೋಶೂಟ್ ಜಗತ್ತಿನಲ್ಲಿಯೇ ಡಿಫರೆಂಟ್ ಆಗಿರಬೇಕು’ ಎಂದು ಇಂದಿನ ಯುವಪೀಳಿಗೆ ಸಮುದ್ರ ತೀರ, ಬೆಟ್ಟ-ಗುಡ್ಡ ಅಂತೆಲ. ಆದರೆ, ಕೆಲವೊಮ್ಮೆ ಈ ಅತಿಯಾದ ಕ್ರಿಯೇಟಿವಿಟಿ ಎಡವಟ್ಟು ಮಾಡಿದ್ದೂ ಇದೆ. ಸದ್ಯ ಟರ್ಕಿಯ ಇಸ್ತಾನ್ಬುಲ್ನಲ್ಲಿ ನಡೆದ ಇಂಥದ್ದೇ ಒಂದು ಮದುವೆ ಫೋಟೋಶೂಟ್ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿದ್ದು, ನೋಡುಗರನ್ನು ಒಂದು ಕ್ಷಣ ಬೆಚ್ಚಿಬೀಳಿಸಿದೆ..ಸಮುದ್ರ ತೀರದಲ್ಲಿ ನಡೀತಿತ್ತು ರೊಮ್ಯಾಂಟಿಕ್ ಫೋಟೋಶೂಟ್!ಇಸ್ತಾನ್ಬುಲ್ನ ಪ್ರಸಿದ್ಧ ಬೋಸ್ಪರಸ್ ಜಲಸಂಧಿಯ ಸಮುದ್ರ ತೀರ. ಹೊಸ ಬಾಳಿಗೆ ಕಾಲಿಡುತ್ತಿರುವ ವಧು ತನ್ನ ವೆಡ್ಡಿಂಗ್ ಗೌನ್ ಧರಿಸಿ, ಕ್ಯಾಮೆರಾಗೆ ಪೋಸ್ ನೀಡುತ್ತಿದ್ದಳು.