ಚಿಕ್ಕಬಳ್ಳಾಪುರ: ನಾಡು ನುಡಿಗಾಗಿ ತ್ಯಾಗ ಮಾಡಿದಂತಹ, ಅಭಿವೃದ್ಧಿಗೆ ಮಹತ್ತರವಾದ ಕೊಡುಗೆಗಳನ್ನು ನೀಡಿದ ರಾಜರು ಎಲ್ಲಿ? ರಾಜಕಾರಣಿಗಳು ಎಲ್ಲಿ? ಈ ಇಬ್ಬರಿಗೂ ಹೋಲಿಸುವುದು ಸರಿಯಲ್ಲ ಎಂದು ಸಂಸದ ಡಾ. ಈ ಇಬ್ಬರಿಗೂ ಹೋಲಿಸುವುದು ಸರಿಯಲ್ಲ ಎಂದು ಸಂಸದ ಡಾ ಕೆ.ಸುಧಾಕರ್ ಕಿಡಿಕಾರಿದ್ದಾರೆ.ಚಿಕ್ಕಬಳ್ಳಾಪುರದಲ್ಲಿನ ಗೃಹ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಮೈಸೂರು ರಾಜರು ಎಲ್ಲಿ?, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎಲ್ಲಿ? ಇವರ ಹೋಲಿಕೆಯೂ ನಿಂಬೆಕಾಯಿ ಮೋಸಂಬಿಗೂ ಇರುವ ವ್ಯತ್ಯಾಸ ಎನ್ನಬಹುದು. ಇವರನ್ನು ರಾಜಕಾರಣಿ ಹೋಲಿಸುವುದು ಅಪಹಾಸ್ಯವೇ ಸರಿ ಎಂದು ವ್ಯಂಗ್ಯವಾಡಿದ್ದಾರೆ.ಸಚಿವ ಯತೀಂದ್ರ ಸಿದ್ದರಾಮಯ್ಯಗೆ ಇನ್ನು ರಾಜಕಾರಣದ ತರಬೇತಿ ಅಗತ್ಯವಿದೆ. ಮೈಸೂರಿನಲ್ಲಿ ಕೆಲಸ ಮಾಡಿದಕ್ಕೆ ರಾಜಮನೆತನದವರ ಬಗ್ಗೆ ಹೋಲಿಕೆ ಮಾಡಿಕೊಂಡು ಮಾತನಾಡುವುದು ಒಂದು ಭ್ರಮೆಯಾಗಿರುತ್ತದೆ ಎಂದರು.