ಕಲಬುರಗಿ: ನಗರದಲ್ಲಿ ಹೆಚ್ಚಿರುವ ಬೀದಿ ನಾಯಿಗಳ ಹಾವಳಿಗೆ ಧರಿಯಾಪುರ-ಕೋಟನೂರ ಜಿಡಿಎ ಬಡಾವಣೆಯ ಬಾಲಕನೊಬ್ಬ ಬಲಿಯಾದ ಹೃದಯ ವಿದ್ರಾವಕ ಘಟನೆ ಶುಕ್ರವಾರ ನಡೆದಿದೆ.ಮನೋಜ (4) ಎಂಬಾತನೇ ಬೀದಿ ಕಚ್ಚಿ ಗ. ತಾಲೂಕಿನ ಜಂಬಗಾ ಗ್ರಾಮದ ಶರಣಬಸಪ್ಪ ಪೂಜಾರಿ ಎಂಬುವರ ಪುತ್ರ ಎಂದು ತಿಳಿದು ಬಂದಿದೆ.ಜಂಬಗಾ ಗ್ರಾಮದ ಶರಣಬಸಪ್ಪ ಹೊಟ್ಟೆಪಾಡಿಗಾಗಿ ಕುಟುಂಬ ಸಮೇತರಾಗಿ ಕಲಬುರಗಿಗೆ ಆಗಮಿಸಿ, ಧರಿಯಾಪುರ-ಕೋಟನೂರ ಜಿಡಿಎ ಬಡಾವಣೆಯಲ್ಲಿ ಇರುವ ರಾಯಲ್ ಪ್ಯಾಲೇಸ್ ಪಂಕ್ಷನ್ ಹಾಲ್ದಲ್ಲಿ ವಾಚ್ ಮೆನ್ ಆಗಿ ಕೆಲಸ ಮಾಡುತ್ತಿದ್ದರು. ಅವರ ಪತ್ನಿ ಕೂಲಿ ಇನ್ನಿತರ ಮನೆಗೆಲಕ್ಕೆ ಹೋಗುತ್ತಿದ್ದರು.ಶುಕ್ರವಾರ ಸಂಜೆ 4 ಗಂಟೆ ಸುಮಾರಿಗೆ ಬಾಲಕ ಗಾಣದೇವತೆ ದೇವಾಲಯ ರಸ್ತೆಯಲ್ಲಿ ಬಾಲಕ ಮನೋಜ ಆಟವಾಡುತ್ತಿರುವಾಗ ಬೀದಿ ನಾಯಿಗಳು ದಾಳಿ ಮಾಡಿವೆ.