ಉಕ್ರೇನ್ ಗಡಿಗೆ ಹತ್ತಿರವಿರುವ ರಷ್ಯಾದ ತೈಲ ಸಂಸ್ಕರಣಾಗಾರದ ಇಂಧನ ಶೇಖರಣಾ ಟ್ಯಾಂಕ್ಗಳನ್ನು ಗುರಿಯಾಗಿಸಿ ಡ್ರೋನ್ ದಾಳಿ ನಡೆಸಲಾಗಿದೆ. ಇದರ ಪರಿಣಾಮವಾಗಿ ಸಂಸ್ಕರಣಾಗಾರದ ಬಹುತೇಕ ಭಾಗಗಳಲ್ಲಿ ಭಾರಿ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದೆ. ದಾಳಿಯ ಭೀಕರತೆಗೆ ತೈಲ ಟ್ಯಾಂಕರ್ಗಳು ಹೊತ್ತಿ ಉರಿದಿದ್ದು, ಕಿಲೋಮೀಟರ್ಗಳಷ್ಟು ದೂರದವರೆಗೂ ಬೃಹತ್ ಪ್ರಮಾಣದಲ್ಲಿ ಕಪ್ಪು ಹೊಗೆ ಹರಡಿದೆ. ಸ್ಥಳೀಯ ನಿವಾಸಿಗಳಲ್ಲಿ ಭೀತಿ ಉಂಟಾಗಿದ್ದು, ಸುತ್ತಮುತ್ತಲಿನ ಜನರನ್ನು ತೆರವುಗೊಳಿಸಲಾಗಿದೆ. ಮಾಸ್ಕೋ, ಅಕ್ಟೋಬರ್ 30: ಉಕ್ರೇನ್ ಹಾಗೂ ರಷ್ಯಾ ನಡುವಿನ ಯುದ್ಧ ತೀವ್ರ ಸ್ವರೂಪ ಪಡೆದುಕೊಂಡಿದ್ದು, ರಷ್ಯಾದ ಪ್ರಮುಖ ತೈಲ ಸಂಸ್ಕರಣಾಗಾರ ಒಂದರ ಮೇಲೆ ಉಕ್ರೇನ್ ಡ್ರೋನ್ ದಾಳಿ ನಡೆಸಿದೆ.