ಮಹಾ ವಂಚಕ ಸುಖೇಶ್ ಚಂದ್ರಶೇಖರ್ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ನ್ಯಾಯಾಲಯವು ನಟಿ ನೋರಾ ಫತೇಹಿಗೆ ನೊಟೀಸ್ ಜಾರಿ ಮಾಡಿದೆ. ಸುಖೇಶ್ ಪ್ರಕರಣದಲ್ಲಿ ಆರಂಭದಿಂದಲೂ ನಟಿ ನೋರಾ ಫತೇಹಿ ಹೆಸರು ಕೇಳಿ ಬರುತ್ತಿದೆಯಾದರೂ ನೋರಾಗೆ ಯಾವುದೇ ಗಂಭೀರ ಸಂಕಷ್ಟ ಎದುರಾಗಿರಲಿಲ್ಲ. ಈಗಲೂ ಸಹ ನೋರಾಗೆ ಸಾಕ್ಷಿ ಆಗಿ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಲಾಗಿದೆ. ಕನ್ನಡದ ‘ಕೆಡಿ’ ಸಿನಿಮಾದ ಹಾಡಿನಿಂದ ವಿವಾದ ಕೇಂದ್ರವಾಗಿದ್ದ ನಟಿ ನೋರಾ ಫತೇಹಿಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ.