ಕೊಯಮತ್ತೂರಿನಲ್ಲಿರುವ ಸದ್ಗುರುಗಳ 'ಸೇವ್ ಸಾಯಿಲ್ ರಿಜನರೇಟಿವ್ ರೆವಲ್ಯೂಷನ್' ಮಾದರಿ ಫಾರ್ಮ್ನಲ್ಲಿ ಮಣ್ಣಿನ ಜೀವಶಾಸ್ತ್ರದ ಕುರಿತು ವಿಶೇಷ ತರಬೇತಿ ಕಾರ್ಯಕ್ರಮವನ್ನು ಸಾಯಿಲ್ ಫುಡ್ ವೆಬ್ ಸ್ಕೂಲ್ ಆಯೋಜಿಸಿತ್ತು. ಈ 10 ದಿನಗಳ ತರಬೇತಿ ಕಾರ್ಯಾಗಾರದಲ್ಲಿ ವಿಶ್ವದ 10 ದೇಶಗಳಿಂದ ಒಟ್ಟು 46 ಜನರು ಭಾಗವಹಿಸಿದ್ದರು. ನೆದರ್ಲೆಂಡ್ಸ್, ಆಸ್ಟ್ರೇಲಿಯಾ, ಇರಾನ್, ಅಮೆರಿಕ, ಕೋಸ್ಟರಿಕಾ ಸೇರಿದಂತೆ ವಿವಿಧ ದೇಶಗಳಿಂದ ಮತ್ತು ಭಾರತದ 7 ರಾಜ್ಯಗಳಿಂದ ಅನೇಕ ಜನರು ಸೇರಿದ್ದರು. 'ಸಾಯಿಲ್ ಫುಡ್ ವೆಬ್ ಸ್ಕೂಲ್' ಒಂದು ಅಂತಾರಾಷ್ಟ್ರೀಯ ಶೈಕ್ಷಣಿಕ ಮತ್ತು ತರಬೇತಿ ಸಂಸ್ಥೆಯಾಗಿದೆ. ಸದ್ಗುರುಗಳ ನೇತೃತ್ವದಲ್ಲಿ ಪ್ರಾರಂಭವಾದ ಜಾಗತಿಕ 'ಮಣ್ಣು ಉಳಿಸಿ' ಆಂದೋಲನದ ಭಾಗವಾಗಿ ಈ ತರಬೇತಿಯನ್ನು ಆಯೋಜಿಸಲಾಗಿತ್ತು.