ಈಗಾಗಲೇ ಬಿಗ್ಬಾಸ್ ಮನೆಯಲ್ಲಿ ಒಂದು ಜೋಡಿ ಇದೆ. ಯಶಸ್ ಮತ್ತು ಆಸಿಯಾರನ್ನು ಪ್ರೇಕ್ಷಕರು ಜೋಡಿಯಂತೆ ನೋಡುತ್ತಿದ್ದಾರೆ. ಇಬ್ಬರ ನಡುವೆ ಒಳ್ಳೆಯ ಗೆಳೆತನ ಇದೆ, ಕೆಲವೊಮ್ಮೆ ಪ್ರೀತಿ-ಪ್ರೇಮದ ಮಾತುಗಳು ಸಹ ಪರೋಕ್ಷವಾಗಿ ನುಸುಳುತ್ತವೆ. ಇದೀಗ ಬಿಗ್ಬಾಸ್ ಮನೆಯಲ್ಲಿ ಮತ್ತೊಂದು ಜೋಡಿ ಆಗುವ ಸುಳಿವು ಸಣ್ಣಗೆ ಸಿಗುತ್ತಿದೆ. ಬಿಗ್ಬಾಸ್ನ ಪ್ರತಿ ಸೀಸನ್ನಲ್ಲೂ ಒಂದಲ್ಲ ಒಂದು ಜೋಡಿ ಆಗುತ್ತಲೇ ಇರುತ್ತದೆ. ಕೆಲ ಜೋಡಿ ಬಿಗ್ಬಾಸ್ ಮನೆಯ ಹೊರಗೂ ಉಳಿದುಕೊಂಡರೆ ಬಹುತೇಕ ಜೋಡಿಗಳು ಬಿಗ್ಬಾಸ್ ಮನೆಯಲ್ಲೇ ಅಂತ್ಯವಾಗುತ್ತವೆ. ತಾಂಡವ್ ಹಾಗೂ ಸೋನಿಕಾ ನಡುವೆ ಇಂಥಹದ್ದೊಂದು ಕೆಮಿಸ್ಟ್ರಿ ಶುರುವಾಗುತ್ತಿರುವುದನ್ನು ಪ್ರೇಕ್ಷಕರು ಗಮನಿಸುತ್ತಿದ್ದಾರೆ. ಈ ವಾರವೆಲ್ಲ ಬಿಗ್ಬಾಸ್ ಮನೆಯಲ್ಲಿ ಸೌಂದರ್ಯಾ ಶೆಟ್ಟಿ ಸ್ವಯಂವರ ನಡೆಯಿತು.