ಮಾಂಗ್ ಕೋಕ್ನಲ್ಲಿ ನಡೆದ ಹಾಂಗ್ ಕಾಂಗ್ ಸಿಕ್ಸಸ್ ಟೂರ್ನಿಯಲ್ಲಿ ಭಾರತ ತಂಡ ಪಾಕಿಸ್ತಾನ ವಿರುದ್ಧ 4 ವಿಕೆಟ್ಗಳ ಸೋಲನುಭವಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಭಾರತ ಕೇವಲ 88 ರನ್ ಗಳಿಸಿತು. ಪಾಕಿಸ್ತಾನದ ನಾಯಕ ಅಬ್ಬಾಸ್ ಅಫ್ರಿದಿ (8 ಎಸೆತಗಳಲ್ಲಿ 35) ಹಾಗೂ ಖವಾಜಾ ನಫೆ (12 ಎಸೆತಗಳಲ್ಲಿ 41) ಅವರ ಅಬ್ಬರದ ಬ್ಯಾಟಿಂಗ್ನಿಂದಾಗಿ ಪಾಕಿಸ್ತಾನ 23 ಎಸೆತಗಳಲ್ಲಿ ಗುರಿ ತಲುಪಿತು. ಕೃನಾಲ್ ಪಾಂಡ್ಯ ದುಬಾರಿಯಾದರು, ಭಾರತದ ಬ್ಯಾಟಿಂಗ್ ವೈಫಲ್ಯ ಎದ್ದು ಕಾಣಿಸಿತು.