ಕೇಂದ್ರ ಸಚಿವ ಎಚ್ಡಿ ಕುಮಾರಸ್ವಾಮಿ ಹಾಗೂ ರಾಜ್ಯ ಗೃಹ ಸಚಿವ ಪ್ರಿಯಾಂಕ್ ಖರ್ಗೆ ನಡುವಿನ ಮಾತಿನ ಸಮರ ತಾರಕಕ್ಕೇರಿದೆ. ಸ್ಟಿಂಗ್ ವಿಚಾರವಾಗಿ ಇಬ್ಬರ ನಡುವೆ ಶುರುವಾದ ಆರೋಪ ಪ್ರತ್ಯಾರೋಪ ಇದಿಗ ವೈಯಕ್ತಿ ಟೀಕೆ ಹಂತಕ್ಕೆ ಹೋಗಿದೆ. ಬೆಂಗಳೂರು, (ಅಕ್ಟೋಬರ್ 29): ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಎಚ್ಡಿ ಕುಮಾರಸ್ವಾಮಿ ನಡುವಿನ ಮಾತಿನ ಸಮರ ಮುಂದುವರೆದಿದೆ. ‘ಆಚಾರವಿಲ್ಲದ ನಾಲಿಗೆ, ವಿಚಾರವಿಲ್ಲದ ಮಾತು’ ಎಂಬ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಕುಮಾರಸ್ವಾಮಿ ಕೆರಳಿ ಕೆಂಡವಾಗಿದ್ದು, ಗೃಹ ಮಂತ್ರಿಯಾಗಿ ರಾಜ್ಯದ ಆಡಳಿತಕ್ಕೆ ಗ್ರಹಣ ಹಿಡಿಸಿದ್ದೀರಿ. ಮಿದುಳು, ನಾಲಿಗೆ, ವಿವೇಕ ಮತ್ತು ಕೆಲಸ ಎಲ್ಲವೂ ಹಳಿತಪ್ಪಿ ಹಾದಿ ತಪ್ಪಿದ್ದೀರಿ. ಒಮ್ಮೆ RSS, ಇನ್ನೊಮ್ಮೆ SIR, ಆಮೇಲೆ ಕುಮಾರಸ್ವಾಮಿ.