ರಕ್ಷಿತಾ ಶೆಟ್ಟಿ ಅವರಿಗೆ ಬಿಗ್ ಬಾಸ್ ಮನೆಯಲ್ಲಿ ಎರಡನೇ ಚಾನ್ಸ್ ಸಿಕ್ಕಿದೆ. ಈ ಮೊದಲು ಸೀಸನ್ 12ರಲ್ಲಿ ಅವರು ಸ್ಪರ್ಧಿಯಾಗಿ ಭಾಗವಹಿಸಿದ್ದರು. ಈಗ ಅವರು 13ನೇ ಸೀಸನ್ನಲ್ಲಿ ಕೂಡ ಅತಿಥಿಯಾಗಿ ದೊಡ್ಮನೆಗೆ ಪ್ರವೇಶ ಪಡೆದಿದ್ದಾರೆ. ಬರುಬರುತ್ತಿದ್ದಂತೆಯೇ ಅವರು ಎಲ್ಲರಿಗಿಂತ ಹೆಚ್ಚು ಮಿಂಚಿದ್ದಾರೆ. ಸ್ವಯಂವರದ ಥೀಮ್ನಲ್ಲಿ ಈ ವಾರ ‘ಬಿಗ್ ಬಾಸ್ ಕನ್ನಡ ಸೀಸನ್ 13’ ಶೋನಲ್ಲಿ ಟಾಸ್ಕ್ ನೀಡಲಾಗಿದೆ. ಕ್ಯಾಪ್ಟನ್ ಆಗಿರುವ ಸೌಂದರ್ಯಾ ಶೆಟ್ಟಿ ಅವರನ್ನು ಒಲಿಸಿಕೊಳ್ಳಲು ಗಗನ್ ಚಿನ್ನಪ್ಪ ಮತ್ತು ಯಶಸ್ ನಡುವೆ ಪೈಪೋಟಿ ಶುರುವಾಗಿದೆ. ಈ ಟಾಸ್ಕ್ನಲ್ಲಿ ಪ್ರತಿಯೊಬ್ಬರಿಗೂ ಒಂದೊಂದು ಪಾತ್ರವನ್ನು ನೀಡಲಾಗಿದೆ.