ಮಾಜಿ ಸಚಿವ ಬಿ ಶ್ರೀರಾಮುಲು ಅವರ ಸೋದರಳಿಯ, ಕಂಪ್ಲಿ ಮಾಜಿ ಶಾಸಕ ಸುರೇಶ್ ಬಾಬು ಅವರಿಗೆ ಬಂಧನ ಭೀತಿ ಶುರುವಾಗಿದೆ. ಪ್ರಕರಣವೊಂದರಲ್ಲಿ ಸುರೇಶ್ ಬಾಬು ವಿರುದ್ಧ ಬಿಹಾರದ ಈಸ್ಟ್ ಚಂಪಾರಣ್ ಕೋರ್ಟ್ ನಾನ್ ಬೇಲೇಬಲ್ ವಾರೆಂಟ್ ಜಾರಿ ಮಾಡಿದೆ. ಹೀಗಾಗಿ ಅರೆಸ್ಟ್ ಮಾಡಲು ಬಿಹಾರ ಪೊಲೀಸರ ತಂಡ ಬಳ್ಳಾರಿಗೆ ಬಂದಿದೆ. ಬಳ್ಳಾರಿ, (ಅಕ್ಟೋಬರ್ 29): ಕಂಪ್ಲಿ ಮಾಜಿ ಶಾಸಕ ಸುರೇಶ್ ಬಾಬು ಅವರಿಗೆ ಬಿಹಾರದ ಈಸ್ಟ್ ಚಂಪಾರಣ್ ಕೋರ್ಟ್ ನಾನ್ ಬೇಲೇಬಲ್ ವಾರಂಟ್ ಜಾರಿ ಮಾಡಿದೆ. ಹೀಗಾಗಿ ಸುರೇಶ್ ಬಾಬು ಅವರ ಬಂಧನಕ್ಕಾಗಿ ಬಿಹಾರ ಪೊಲೀಸರ ತಂಡ ಬಳ್ಳಾರಿಗೆ ಆಗಮಿಸಿದ್ದು, ಬಳ್ಳಾರಿ ಎಸ್ಪಿ ಡಾ.ಸುಮನ್ ಡಿ.ಪೆನ್ನೇಕರ್ ಅವರ ಸಹಕಾರ ಕೋರಿದೆ.