ಉಳ್ಳಾಲ: ಶಾಲೆಗೆ ಹೋಗುತ್ತಿದ್ದ ಬಾಲಕಿಯನ್ನು ಪುಸಲಾಯಿಸಿ ಕಾರಿನಲ್ಲಿ ಕರೆದೊಯ್ದ ಬಾಗಲಕೋಟೆ ಮೂಲದ ಆರೋಪಿಯನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ. ಮೂಲತಃ ಬಾಗಲಕೋಟೆ ಜಿಲ್ಲೆಯ, ಪ್ರಸ್ತುತ ಉಳ್ಳಾಲ. ಮೂಲತಃ ಬಾಗಲಕೋಟೆ ಜಿಲ್ಲೆಯ, ಪ್ರಸ್ತುತ ಉಳ್ಳಾಲದಲ್ಲಿ ಗಾರೆ ಕೆಲಸ ನಿರ್ವಹಿಸುತ್ತಿದ್ದ ಗೂಡಸಾಬ್ ಯಾನೆ ಆಶಿಫ್(23) ಬಂಧಿತ ಆರೋಪಿ. ಉಳ್ಳಾಲ ತಾಲೂಕು ವ್ಯಾಪ್ತಿಯ ಬಾಡಿಗೆ ಮನೆಯಲ್ಲಿ ನೆಲೆಸಿರುವ ಬಾಗಲಕೋಟೆ ಮೂಲದ ಕುಟುಂಬದ ಅಪ್ರಾಪ್ತ ಸಹೋದರಿಯರಿಬ್ಬರು ಮಂಗಳವಾರ ಬೆಳಗ್ಗೆ ಶಾಲಾ ವಾಹನದಲ್ಲಿ ಶಾಲೆಗೆ ಹೋಗಿದ್ದರು. ಆದರೆ ಹಿರಿಯವಳು ಶಾಲೆಗೆ ಗೈರಾಗಿದ್ದರಿಂದ ಶಿಕ್ಷಕಿ ಪಾಲಕರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದರು.