ನವದೆಹಲಿ: ಭಾರತ ಮಹಿಳಾ ಕ್ರಿಕೆಟ್ ತಂಡದ(Indian Women's Cricket Team) ನಾಯಕಿ ಸ್ಥಾನಕ್ಕೆ ಹರ್ಮನ್ಪ್ರೀತ್ ಕೌರ್ ರಾಜೀನಾಮೆ ನೀಡಿದ ಬೆನ್ನಲ್ಲೇ, ಭಾರತೀಯ ಡ್ರೆಸ್ಸಿಂಗ್ ರೂಮ್ನಲ್ಲಿ. ಸಿಸಿಐ ನಡೆಸಿದ ಮಹತ್ವದ ಪರಾಮರ್ಶನಾ ಸಭೆಯ ಬಳಿಕ 37 ವರ್ಷದ ಹರ್ಮನ್ಪ್ರೀತ್ ಕೌರ್(Harmanpreet Kaur) ನಾಯಕತ್ವದಿಂದ ಕೆಳಗಿಳಿಯುವ ನಿರ್ಧಾರ ಪ್ರಕಟಿಸಿದ್ದಾರೆ. ಜಪಾನ್ನಲ್ಲಿ ನಡೆದ ಏಷ್ಯನ್ ಗೇಮ್ಸ್ನಲ್ಲಿ (Asian Games) ಭಾರತಕ್ಕೆ ಸತತ ಎರಡನೇ ಚಿನ್ನದ ಪದಕ ಗೆದ್ದುಕೊಟ್ಟ ಹೆಗ್ಗಳಿಕೆಯೊಂದಿಗೆ ಅವರು ಕ್ಯಾಪ್ಟನ್ಸಿಗೆ ವಿದಾಯ ಹೇಳಿದ್ದಾರೆ. ರಾಜೀನಾಮೆ ಬೆನ್ನಲ್ಲೇ 30 ವರ್ಷದ ಎಡಗೈ ಬ್ಯಾಟರ್ ಸ್ಮೃತಿ ಮಂಧಾನ ಅವರ ಹೆಗಲಿಗೆ ನಾಯಕತ್ವದ ಹೊಣೆಗಾರಿಕೆ ಬಂದಿದೆ.