ಬೆಂಗಳೂರು : ಜ್ಯುವೆಲ್ಸ್ ಆಫ್ ಇಂಡಿಯಾ -2026ರ ಬೃಹತ್ ಆಭರಣ ಉತ್ಸವಕ್ಕೆ ಗುರುವಾರ ಚಾಲನೆ ದೊರೆಯಿತು. ನ.1 (ಭಾನುವಾರ) ರವರೆಗೆ ನಡೆಯಲಿರುವ ಮೇಳಕ್ಕೆ ಬಾಲಿವುಡ್ ನಟಿ ಮೃಣಾಲ್ ಠಾಕೂರ್ ಚಾಲನೆ ನೀಡ. ನವನವೀನ ಬಗೆಯ ಬಂಗಾರ, ವಜ್ರ ಮತ್ತು ಪ್ಲಾಟಿನಮ್ ಆಭರಣಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಅವಕಾಶವಿದೆ. ಪ್ರತಿದಿನ ಬೆಳಗ್ಗೆ 9.30ರಿಂದ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶವಿದ್ದು, ಮುಂಬರುವ ದೀಪಾವಳಿ ಹಬ್ಬದ ಸಂಭ್ರಮವನ್ನು ಅಪರೂಪದ ಗ್ರಾಂಡ್ ಡಿಸೈನ್ ಆಭರಣಗಳ ಖರೀದಿಯೊಂದಿಗೆ ಆಚರಿಸಬಹುದು.ಗಣಪತಿ ಪೂಜೆಯೊಂದಿಗೆ ಮೇಳಕ್ಕೆ ಚಾಲನೆ ನೀಡಿ, ನಂತರ ಮಾತನಾಡಿದ ನಟಿ ಮೃಣಾಲ್ ಠಾಕೂರ್, ಭಾರತೀಯ ಆಭರಣಗಳ ವಿನ್ಯಾಸ, ಸಂಸ್ಕೃತಿ, ಇಲ್ಲಿನ ಕುಶಲಕರ್ಮಿಗಳ ಕೈಚಳಕ ವಿಶ್ವದಲ್ಲೇ ವಿಶಿಷ್ಟವಾಗಿದೆ.