ಕೊನೆಗೂ ರಾಜ್ಯ ಸರ್ಕಾರ ನಂದಿನಿ ಹಾಲಿನ ದರವನ್ನು 8 ರೂ. ಹೆಚ್ಚಳ ಮಾಡಿದೆ. ಈ 8 ರೂಪಾಯಿ ಪೈಕಿ ರೈತರಿಗೆ 7 ರೂಪಾಯಿ ಮತ್ತು ಉಳಿದ 1 ರೂಪಾಯಿ ಒಕ್ಕೂಟಗಳಿಗೆ ಸಿಗಲಿದ್ದು, ನವೆಂಬರ್ 1 ರಿಂದ ಪರಿಸ್ಕೃತ ದರ ಜಾರಿಗೆ ಬರಲಿದೆ. ಇದರ ಬೆನ್ನಲ್ಲೇ ಇದೀಗ ಹೋಟೆಲ್ಗಳಲ್ಲಿ ಕಾಫಿ,ಟೀ ಹಾಗೂ ತಿಂಡಿ ತಿನಿಸುಗಳ ದರ ಏರಿಕೆಯಾಗಲಿದೆ. ಇದರ ಮಧ್ಯೆ ಇದೀಗ ಹಾಲಿನ ಉತ್ಪನ್ನಗಳ ದರ ಸಹ ಹೆಚ್ಚಳವಾಗಲಿದೆ. ಈ ಬಗ್ಗೆ ಸ್ವತಃ ಸಹಕಾರಿ ಸಚಿವ ಲಕ್ಷ್ಮಣ ಸವದಿ ಸುಳಿವು ನೀಡಿದ್ದಾರೆ.