ತಮಿಳು ಚಿತ್ರರಂಗ ಈ ಸೂಪರ್ ಸ್ಟಾರ್ಗಳಾದ ರಜನೀಕಾಂತ್-ಕಮಲ್ ಹಾಸನ್ ಒಟ್ಟಿಗೆ ನಟಿಸಿ ದಶಕಗಳೇ ಕಳೆದಿವೆ. ಇಬ್ಬರೂ ಒಟ್ಟಿಗೆ ನಟಿಸಬೇಕೆಂಬುದು ಸಿನಿಮಾ ಪ್ರೇಮಿಗಳ ಬಹು ವರ್ಷದ ಬೇಡಿಕೆ ಆಗಿತ್ತು. ಇದೀಗ ಆ ಬೇಡಿಕೆ ಈಡೇರುತ್ತಿದೆ. ಕೆಲ ತಿಂಗಳ ಹಿಂದೆ ರಜನಿ ಮತ್ತು ಕಮಲ್ ಅವರು ಒಟ್ಟಿಗೆ ನಟಿಸುತ್ತಿರುವ ಸಿನಿಮಾದ ಬಗ್ಗೆ ಘೋಷಣೆ ಆಗಿತ್ತು. ಸಿನಿಮಾಕ್ಕಾಗಿ ಒಂದು ಕಿರು ಟೀಸರ್ ಅನ್ನು ಸಹ ಬಿಡುಗಡೆ ಮಾಡಲಾಗಿತ್ತು. ಆದರೆ ಅದಾದ ಮೇಲೆ ಸಿನಿಮಾದ ಅಪ್ಡೇಟ್ ಏನೂ ಹೊರಗೆ ಬಂದಿರಲಿಲ್ಲ.