ಅಡುಗೆ ಮನೆಯಲ್ಲಿರುವ ಮಸಾಲೆ ಡಬ್ಬಗಳು, ಸಕ್ಕರೆ ಡಬ್ಬಗಳನ್ನು ಆಗಾಗ್ಗೆ ಸ್ವಚ್ಛಗೊಳಿಸುತ್ತಿರಬೇಕು. ಇಲ್ಲದಿದ್ದರೆ ಕೊಳೆ, ಕಲೆಗಳು ತುಂಬಿ ಬಿಡುತ್ತವೆ. ಕೆಲವೊಮ್ಮೆ ಇದನ್ನು ಎಷ್ಟೇ ತಿಕ್ಕಿ ತೊಳದೆದರೂ ಡಬ್ಬಗಳಲ್ಲಿ ಅಂಟಿರುವ ಕಲೆಗಳು ಹೋಗುವುದೇ ಇಲ್ಲ. ಹೀಗಿರುವಾಗ ಅಡುಗೆ ಸೋಡಾದ ಸಹಾಯದಿಂದ ಅಡುಗೆ ಸಾಮಾಗ್ರಿ ಡಬ್ಬಗಳಲ್ಲಿ ಅಂಟಿರುವ ಕೊಳೆಯನ್ನು ಕ್ಲೀನ್ ಮಾಡಬಹುದು. ಅದು ಹೇಗೆ ಎಂಬ ಪೂರ್ಣ ವಿವರ ಇಲ್ಲಿದೆ. ಸಾಮಾನ್ಯವಾಗಿ ಮಸಾಲೆ ಪುಡಿ, ಸಕ್ಕರೆ, ಚಹಾ ಪುಡಿ, ಬೇಳೆಕಾಳುಗಳನ್ನೆಲ್ಲಾ ಪ್ಲಾಸ್ಟಿಕ್, ಸ್ಟೀಲ್ ಇಲ್ಲವೇ ಗ್ಲಾಸ್ ಜಾರ್ಗಳಲ್ಲಿ ಸಂಗ್ರಹಿಸಿಡುತ್ತೇವೆ. ಈ ಅಡುಗೆ ಸಾಮಾಗ್ರಿ ಡಬ್ಬಗಳನ್ನು (containers) ಕಾಲ ಕಾಲಕ್ಕೆ ಸ್ವಚ್ಛಗೊಳಿಸದಿದ್ದರೆ ಕೊಳೆ ಮತ್ತು ಜಿಡ್ಡು ಕಾಣಿಸಿಕೊಳ್ಳಲು ಆರಂಭಿಸುತ್ತದೆ. ಇದರಿಂದಾಗಿ ಡಬ್ಬದಲ್ಲಿ ಸಂಗ್ರಹಿಸಿಡುವ ಪದಾರ್ಥಗಳ ರುಚಿ ಕೆಡುತ್ತದೆ.