ಕರ್ನಾಟಕದಲ್ಲಿ ನಂದಿನಿ ಹಾಲಿನ ದರ ಪ್ರತಿ ಲೀಟರ್ಗೆ 8 ರೂಪಾಯಿ ಹೆಚ್ಚಳ ಮಾಡಲಾಗಿದ್ದು, ಇದು ರೈತರ ಹಿತದೃಷ್ಟಿಯಿಂದ ಕೈಗೊಂಡಿರುವ ನಿರ್ಧಾರ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ಕಳೆದ ಒಂದು-ಎರಡು ವರ್ಷಗಳಿಂದ ಹಾಲಿನ ಬೆಲೆ ಏರಿಕೆಗೆ ಬೇಡಿಕೆಯಿತ್ತು. ಡೀಸೆಲ್, ಪೆಟ್ರೋಲ್ ದರ ಹೆಚ್ಚಳ, ವಾಹನ ಮತ್ತು ಪ್ಲಾಸ್ಟಿಕ್ ಕವರ್ ಬೆಲೆ ಏರಿಕೆಯಿಂದ ಹಾಲಿನ ಸಾಗಾಟ ಹಾಗೂ ಉತ್ಪಾದನಾ ವೆಚ್ಚ ಗಣನೀಯವಾಗಿ ಏರಿಕೆಯಾಗಿದೆ ಎಂದವರು ಹೇಳಿದ್ದಾರೆ.