ರಾತ್ರಿ ತಡವಾಗಿ ಊಟ ಮಾಡುವ ಮತ್ತು ಮಧ್ಯರಾತ್ರಿ ತಿಂಡಿ ತಿನ್ನುವ ಅಭ್ಯಾಸ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಕೆಲವು ಸಂಶೋಧನೆಗಳು ತಡವಾದ ಊಟದ ಸಮಯ ಮತ್ತು ಮೆದುಳಿನ ರಕ್ತನಾಳಗಳ ಕಾಯಿಲೆಗಳ ಅಪಾಯದ ನಡುವೆ ಸಂಬಂಧವಿರುವುದನ್ನು ಸೂಚಿಸಿವೆ. ಹಾಗಾದರೆ ರಾತ್ರಿ ಯಾವ ಸಮಯಕ್ಕೆ ಊಟ ಮಾಡಬೇಕು? ಯಾವ ಆಹಾರಗಳನ್ನು ಆಯ್ಕೆ ಮಾಡಬೇಕು? ಪಾರ್ಶ್ವವಾಯುವಿನ ಅಪಾಯವನ್ನು ಕಡಿಮೆ ಮಾಡಲು ಅನುಸರಿಸಬೇಕಾದ ಆರೋಗ್ಯಕರ ಅಭ್ಯಾಸಗಳನ್ನು ತಿಳಿದುಕೊಳ್ಳಿ. ಇಂದಿನ ಬಿಡುವಿಲ್ಲದ ಜೀವನಶೈಲಿಯಲ್ಲಿ ರಾತ್ರಿ ತಡವಾಗಿ ಊಟ ಮಾಡುವುದು ಮತ್ತು ಮಧ್ಯರಾತ್ರಿ ತಿಂಡಿ ತಿನ್ನುವ ಅಭ್ಯಾಸ ಹೆಚ್ಚುತ್ತಿದೆ. ಕೆಲಸದ ಒತ್ತಡ, ಮೊಬೈಲ್ ಬಳಕೆ, ತಡವಾಗಿ ಮಲಗುವುದು ಮತ್ತು ಅನಿಯಮಿತ ದಿನಚರಿ ಇದಕ್ಕೆ ಪ್ರಮುಖ ಕಾರಣಗಳಾಗಿವೆ.