ಚಿಂಚೋಳಿ: ಯಾಂತ್ರೀಕರಣದ ಯುಗದಲ್ಲಿ ದೇಶದ ಬೆನ್ನೆಲುಬಾದ ಜೋಡೆತ್ತು ಕೃಷಿಕರು ಎದುರಿಸುತ್ತಿರುವ ಸಂಕಷ್ಟ ಅಪಾರ. ಮಣ್ಣಿನ ಫಲವತ್ತತೆ ಮತ್ತು ಸಾವಯವ ಕೃಷಿ ಪದ್ಧತಿ ಜೀವಂತವಾಗಿಟ್ಟಿರುವ ಎತ್ತಿನಬಂಡಿ. ಆರ್ಥಿಕವಾಗಿ ಸೂಕ್ತ ಬೆಂಬಲ ನೀಡಬೇಕು ಎಂದು ನಿಡಗುಂದಾದ ಶ್ರೀ ಕರುಣೇಶ್ವರ ಶಿವಾಚಾರ್ಯರು ಹೇಳಿದರು.ಶ್ರೀ ಮಹಾಂತೇಶ್ವರ ಮಠದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆಯಿಂದ ಬುಧವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ 150 ಜೋಡೆತ್ತು ಕೃಷಿಕರನ್ನು ಸನ್ಮಾನಿಸಿ, ಪ್ರಮಾಣಪತ್ರ ವಿತರಿಸುವ ಮಾತನಾಡಿ, ರೈತರ ಸಮಸ್ಯೆಗಳಿಗೆ ಸರ್ಕಾರ ಧ್ವನಿಯಾಗಬೇಕು. ಸಂಕಷ್ಟದ ಸ್ಥಿತಿಯಲ್ಲಿ ಬೆನ್ನಿಗೆ ನಿಲ್ಲಬೇಕು ಎಂದು ಒತ್ತಾಯಿಸಿದರು.