ಯಾದಗಿರಿ: ವಿಧಾನ ಪರಿಷತ್ನ ಈಶಾನ್ಯ ಶಿಕ್ಷಕರ ಮತಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ&ಜೆಡಿಎಸ್ ಮೈತ್ರಿ ಅಭ್ಯರ್ಥಿ ಶಶೀಲ್ ನಮೋಶಿ ಗೆಲ್ಲುವ ಮೂಲಕ ಆಡಳಿತಾರೂಢ ಕಾಂಗ್ರೆಸ್ ಸರ್ಕಾರಕ್ಕೆ ಅಚ್. 13 ಜನರು ಕಣದಲ್ಲಿದ್ದರೂ ಬಿಜೆಪಿಯ ನಮೋಶಿ ಮತ್ತು ಪರಾಜಿತ ಅಭ್ಯರ್ಥಿ ಕಾಂಗ್ರೆಸ್ನ ಶರಣಪ್ಪ ಮಟ್ಟೂರ ನಡುವೆಯೇ ಹಣಾಹಣಿ ಏರ್ಪಟಿತ್ತು.ಮತದಾನಕ್ಕೂ ಮುನ್ನ ಈ ಇಬ್ಬರಲ್ಲಿ ಇವರೇ ಗೆಲ್ಲುತ್ತಾರೆಂಬ ಬಗ್ಗೆ ಹೇಳದಷ್ಟು ಟಫ್ ಫೈಟ್ ನಡೆದಿತ್ತು. ಆದರೆ ಫಲಿತಾಂಶ ಬಿಜೆಪಿ ಪರ ಬರುವ ಮೂಲಕ ಕಾಂಗ್ರೆಸ್ ಮತ್ತು ಮತಕ್ಷೇತ್ರ ವ್ಯಾಪ್ತಿಯ ಸಚಿವ&ಶಾಸಕರು ಮತ್ತು ಮುಖಂಡರಲ್ಲಿ ಗೆಲ್ಲುವ ನಿರೀಕ್ಷೆ ಹುಸಿಯಾಗಿದ್ದು ಹೇಗೆ ಎಂಬ ಚಿಂತೆ ಕಾಡುತ್ತಿದೆ. ಅವರ ಸಮಸ್ಯೆಗಳಿಗೆ ಸರ್ಕಾರ ಮತ್ತು ಪಕ್ಷ ಸ್ಪಂದಿಸಲಿಲ್ಲವೇ?