ವಿಶ್ವಾದ್ಯಂತ ಟೆಕ್ ಕ್ಷೇತ್ರದಲ್ಲಿ ಪ್ರತೀ ವರ್ಷ ಲಕ್ಷಾಂತರ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವುದು ಮುಂದುವರಿದಿದೆ. ಮೈಕ್ರೋಸಾಫ್ಟ್ ಸಂಸ್ಥೆ 60,000 ಉದ್ಯೋಗಿಗಳಿಗೆ ವಾಲಂಟರಿ ಎಕ್ಸಿಟ್ಗೆ ಸೂಚಿಸಿದೆ. ಇನ್ನೋಡಾಟಾ ಕಂಪನಿಯ 550ಕ್ಕೂ ಹೆಚ್ಚು ಉದ್ಯೋಗಿಗಳು ದಿಢೀರನೇ ಕೆಲಸ ಕಳೆದುಕೊಂಡಿದ್ದಾರೆ. ಅಮೇಜಾನ್ನಲ್ಲಿ ಒಂದೇ ತಿಂಗಳಲ್ಲಿ ಎರಡು ಬಾರಿ ಲೇ ಆಫ್ ಆಗಿದೆ. ನವದೆಹಲಿ, ಅಕ್ಟೋಬರ್ 29: ಟೆಕ್ ಕ್ಷೇತ್ರದಲ್ಲಿ ಲೇ ಆಫ್ ಮೇಲೆ ಲೇ ಆಫ್ ನಡೆಯುತ್ತಿದೆ. ನೂರಾರು ಸಂಖ್ಯೆಯಲ್ಲಿ, ಸಾವಿರಾರು ಸಂಖ್ಯೆಯಲ್ಲಿ ಉದ್ಯೋಗಗಳು ಕಳೆದುಹೋಗುತ್ತಿವೆ. ಮೈಕ್ರೋಸಾಫ್ಟ್ನಲ್ಲಿ ಬರೋಬ್ಬರಿ 60,000 ಮಂದಿಯನ್ನು ಕೆಲಸದಿಂದ ತೆಗೆಯಲಾಗುತ್ತಿರುವ ಆಘಾತಕಾರಿ ಸುದ್ದಿ ಇದೆ. ಇನ್ನೋಡಾಟಾ ಸಂಸ್ಥೆ ಭಾರತದಲ್ಲಿ 550 ಉದ್ಯೋಗಿಗಳನ್ನು ದಿಢೀರನೇ ಲೇ ಆಫ್ ಮಾಡಿದೆ ಎಂದು ಮೊನ್ನೆ ಮಾಧ್ಯಮಗಳಲ್ಲಿ ವರದಿಯಾಗಿದೆ.