ಆರ್ಸಿಬಿ ಮಹಿಳಾ ಪ್ರೀಮಿಯರ್ ಲೀಗ್ 2027ರ ಆವೃತ್ತಿಗೆ 17 ಆಟಗಾರ್ತಿಯರ ಬಲಿಷ್ಠ ತಂಡವನ್ನು ಕಟ್ಟಿದೆ. ಹರಾಜಿನಲ್ಲಿ ಜೆಸ್ ಜೊನಾಸೆನ್, ಕ್ಲೋಯ್ ಟ್ರಯಾನ್, ವೃಂದಾ ದಿನೇಶ್ ಮತ್ತು ತೇಜಲ್ ಹಸಬ್ನಿಸ್ ಅವರನ್ನು ಖರೀದಿಸಿ ತಂಡಕ್ಕೆ ಹೆಚ್ಚಿನ ಬಲ ನೀಡಲಾಗಿದೆ. ಪ್ರಮುಖ ಆಟಗಾರ್ತಿಯರನ್ನು ಉಳಿಸಿಕೊಂಡು, ಬ್ಯಾಟಿಂಗ್ ಮತ್ತು ಆಲ್ರೌಂಡರ್ ವಿಭಾಗವನ್ನು ಗಟ್ಟಿಗೊಳಿಸಿರುವ ಆರ್ಸಿಬಿ, ಈ ಬಾರಿ ಪ್ರಶಸ್ತಿ ಗೆಲ್ಲುವ ಗುರಿಯೊಂದಿಗೆ ಕಣಕ್ಕಿಳಿಯಲು ಸಜ್ಜಾಗಿದೆ. ಮಹಿಳಾ ಪ್ರೀಮಿಯರ್ ಲೀಗ್ 2027ರ ಆವೃತ್ತಿಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ 17 ಆಟಗಾರ್ತಿಯರ ಬಲಿಷ್ಠ ತಂಡವನ್ನು ಸಿದ್ಧಪಡಿಸಿದೆ. ಹರಾಜಿನಲ್ಲಿ ನಾಲ್ವರು ಆಟಗಾರ್ತಿಯರನ್ನು ಖರೀದಿಸುವ ಮೂಲಕ ಈಗಾಗಲೇ ಬಲಿಷ್ಠವಾಗಿದ್ದ ತಂಡವನ್ನು ಮತ್ತಷ್ಟು ಗಟ್ಟಿಗೊಳಿಸಿದೆ.