ಬೆಂಗಳೂರು: ಬಾಲನಟನಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿ ಸಂಗೀತ ನಿರ್ದೇಶಕ, ಗಾಯಕ, ಕಂಠದಾನ ಕಲಾವಿದನಾಗಿ ಚಿತ್ರರಂಗ ಮಾತ್ರವಲ್ಲದೇ ಕಿರುತೆರೆಯಲ್ಲೂ ಛಾಪು ಮೂಡಿಸಿದವರು ಕಾರ್ತಿಕ್ ಶರ್ಮಾ. ಇದೀಗ. ಇದೀಗ ನಾಯಕ, ನಿರ್ದೇಶಕ, ನಿರ್ಮಾಪಕನಾಗಿ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ಈಗಾಗಲೇ ಹಾಡುಗಳು ಮತ್ತು ಟ್ರೇಲರ್ ಬಿಡುಗಡೆಯಾಗಿದ್ದು, ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸುವಲ್ಲಿ ಸಕ್ಸಸ್ ಆಗಿವೆ. ವಿಶೇಷ ಅಂದರೆ ಕಾರ್ತಿಕ್ ಈ ಚಿತ್ರದಲ್ಲಿ ಯುವಕ ಮತ್ತು ಮಂಗಳಮುಖಿಯಾಗಿ ಎರಡು ಶೇಡ್ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸಂಗೀತ ಮತ್ತು ನಟನೆಯಲ್ಲಿ ಪಳಗಿದ್ದರೂ ನಿರ್ದೇಶಕನಾಗಲು ಕಲಿಕೆ ಬೇಕಿತ್ತು. ಕೆಲ ಮ್ಯೂಸಿಕ್ ವಿಡಿಯೋಗಳನ್ನು ನಿರ್ದೇಶಿಸಿ, ಹಿಂದಿ ಚಿತ್ರಗಳ ಪ್ರಿ&ಪ್ರೊಡಕ್ಷನ್ನಲ್ಲಿ ಕೆಲಸ ಮಾಡಿ ಅನುಭವ ಪಡೆದೆ.