ಸಲ್ಮಾನ್ ಖಾನ್ ಅವರನ್ನು ನೇರವಾಗಿ ಹೆದರಿಸಲು ಸಾಧ್ಯವಾಗದಿದ್ದಾಗ, ಅವರ ಆಪ್ತರು, ಸ್ನೇಹಿತರು ಮತ್ತು ಉದ್ಯಮದ ಸಹವರ್ತಿಗಳನ್ನು ಗುರಿಯಾಗಿಸಿಕೊಂಡು ಭೀತಿ ಹುಟ್ಟಿಸುವುದು ಬಿಷ್ಣೋಯ್ ಗ್ಯಾಂಗ್ನ ತಂತ್ರ. ಈ ಹಿಂದೆ ಹತ್ಯೆಗೊಳಗಾದ ರಾಜಕಾರಣಿ ಬಾಬಾ ಸಿದ್ದೀಕಿ ಅವರ ಹತ್ಯೆಯೂ ಇದೇ ತಂತ್ರದ ಭಾಗವಾಗಿತ್ತು. ಪ್ರಸ್ತುತ ಮುಂಬೈ ಪೊಲೀಸರು ಈ ಎಲ್ಲ ಆಯಾಮಗಳಲ್ಲಿ ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ನಿರಂತರ ಬೆದರಿಕೆ ಹಾಕುತ್ತಿರುವ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್, ಈಗ ಸಲ್ಮಾನ್ ಅವರ ಆಪ್ತ ನಟರನ್ನೂ ಟಾರ್ಗೆಟ್ ಮಾಡಲು ಸಂಚು ರೂಪಿಸಿತ್ತು ಎಂಬ ಆಘಾತಕಾರಿ ಮಾಹಿತಿಯು ತನಿಖೆಯಿಂದ ಹೊರಬಿದ್ದಿದೆ.