ಪದೇಪದೇ ವಿಷಯಗಳನ್ನು ಮರೆತುಹೋಗುವುದು, ಸುಸ್ತು, ಕೈಕಾಲುಗಳಲ್ಲಿ ಜುಮ್ಮೆನಿಸುವಿಕೆ ಮತ್ತು ಏಕಾಗ್ರತೆಯ ಕೊರತೆ ಕೆಲವೊಮ್ಮೆ ವಿಟಮಿನ್ ಬಿ12 ಕೊರತೆಯ ಲಕ್ಷಣಗಳಾಗಿರಬಹುದು. ನರಮಂಡಲ ಮತ್ತು ಕೆಂಪು ರಕ್ತಕಣಗಳ ಉತ್ಪಾದನೆಗೆ ಈ ವಿಟಮಿನ್ ಅಗತ್ಯವಾಗಿದೆ. ಹಾಲು, ಮೊಸರು, ಮೊಟ್ಟೆ, ಮೀನು ಸೇರಿದಂತೆ ವಿವಿಧ ಆಹಾರಗಳಲ್ಲಿ ಇದು ದೊರೆಯುತ್ತದೆ. ಮರೆವಿನ ಸಮಸ್ಯೆ ನಿರಂತರವಾಗಿದ್ದರೆ ವೈದ್ಯರನ್ನು ಸಂಪರ್ಕಿಸಿ, ಅಗತ್ಯ ಪರೀಕ್ಷೆ ಮಾಡಿಸಿಕೊಳ್ಳುವುದು ಮುಖ್ಯ. ದೇಹದ ಆರೋಗ್ಯ ಕಾಪಾಡಿಕೊಳ್ಳಲು ಅಗತ್ಯವಾದ ಪೋಷಕಾಂಶಗಳಲ್ಲಿ ವಿಟಮಿನ್ ಬಿ12 ಪ್ರಮುಖವಾಗಿದೆ. ಇದು ನರಮಂಡಲ ಸರಿಯಾಗಿ ಕಾರ್ಯನಿರ್ವಹಿಸಲು ಮತ್ತು ಕೆಂಪು ರಕ್ತಕಣಗಳ ಉತ್ಪಾದನೆಗೆ ಸಹಾಯ ಮಾಡುತ್ತದೆ. ದೇಹದಲ್ಲಿ ಈ ವಿಟಮಿನ್ ಕೊರತೆಯಾದರೆ ಸುಸ್ತು, ನಿಶ್ಶಕ್ತಿ, ಕೈಕಾಲುಗಳಲ್ಲಿ ಜುಮ್ಮೆನಿಸುವಿಕೆ ಹಾಗೂ ನೆನಪಿನ ಶಕ್ತಿಗೆ ಸಂಬಂಧಿಸಿದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.