ಭಾರತ ತಂಡದ ಬ್ಯಾಟಿಂಗ್ ಲೈನ್ಅಪ್ ಎದುರು ಬೌಲಿಂಗ್ ಮಾಡುವುದು ಎಷ್ಟು ಕಠಿಣ ಎಂಬುದನ್ನು ನ್ಯೂಝಿಲೆಂಡ್ ವಿರುದ್ಧದ ಪಂದ್ಯ ಮತ್ತೊಮ್ಮೆ ಸಾಬೀತುಪಡಿಸಿದೆ. ವೆಲ್ಲಿಂಗ್ಟನ್ನಲ್ಲಿ ಭಾರತದ ಅಬ್ಬರಕ್ಕೆ ಕಿವೀಸ್ ಬೌಲರ್ಗಳು ತತ್ತರಿಸಿದ್ದನ್ನು ಕಂಡ ವೆಸ್ಟ್ ಇಂಡೀಸ್ ಮುಖ್ಯ ತರಬೇತುದಾರ ಡ್ಯಾರೆನ್ ಸ್ಯಾಮಿ, ತಮ್ಮ ತಂಡ ಭಾರತದ ನೆಲದಲ್ಲೇ ಇತ್ತೀಚೆಗೆ ತೋರಿದ ಹೋರಾಟದ ಮೌಲ್ಯವನ್ನು ನೆನೆದಿದ್ದಾರೆ. ವೆಲ್ಲಿಂಗ್ಟನ್ನಲ್ಲಿ ನ್ಯೂಝಿಲೆಂಡ್ ವಿರುದ್ಧ ಭಾರತ ತಂಡ ದಾಖಲೆಯ ರನ್ ಚೇಸ್ ನಡೆಸಿ ಜಯಭೇರಿ ಬಾರಿಸಿದ ಬೆನ್ನಲ್ಲೇ, ವೆಸ್ಟ್ ಇಂಡೀಸ್ ತಂಡದ ಮುಖ್ಯ ಕೋಚ್ ಡ್ಯಾರೆನ್ ಸ್ಯಾಮಿ ತಮ್ಮ ತಂಡದ ಪ್ರದರ್ಶನವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.