ಬ್ಯಾಡಗಿ: ಕಡ್ಡಿ ಹಾಗೂ ಡಬ್ಬಿ ತಳಿಯ ಮೆಣಸಿನಕಾಯಿ ಪ್ರಸಕ್ತ ಸಾಲಿನಲ್ಲಿ ಹೆಚ್ಚಿನ ಬೆಲೆಯಲ್ಲಿ ಮಾರಾಟವಾಗುತ್ತಿದ್ದು, ಈ ವಾರದಿಂದ ಮಾರುಕಟ್ಟೆಗೆ ಹೊಸ ಮೆಣಸಿನಕಾಯಿ ಆವಕ ಏರಿಕೆಯಾಗಿದೆ. ದಸರಾ, ಶೀಗ. ದಸರಾ, ಶೀಗೆ ಹುಣ್ಣಿಮೆ ಹಬ್ಬಗಳು ಮುಗಿಯುತ್ತಿದ್ದಂತೆ, ಮಂಗಳವಾರ 14,410 ಚೀಲ ಆವಕವಾಗಿ ವಹಿವಾಟು ಏರಿಕೆಯಾಗಿದೆ. ಪರಿಣಾಮ ವರ್ತಕರು, ದಲ್ಲಾಳಿ ಅಂಗಡಿಕಾರರು, ಹಮಾಲರಲ್ಲಿ ಉತ್ಸಾಹ ಇಮ್ಮಡಿಸಿದೆ.ಎರಡು ವರ್ಷಗಳಿಂದ ಒಣ ಮೆಣಸಿನಕಾಯಿ ಬೆಲೆ ಏರಿಕೆಯಾಗುತ್ತಲಿದೆ. ಕಳೆದ ತಿಂಗಳು ಡಬ್ಬಿ, ಕಡ್ಡಿ ತಳಿ ದರ ಕ್ವಿಂಟಾಲ್ಗೆ 80 ಸಾವಿರ ರೂ. ದರ ಸ್ಥಿರತೆ ಕಾಯ್ದುಕೊಂಡಿದೆ.ಮಂಗಳವಾರ ಟೆಂಡರ್ನಲ್ಲಿ ಡಬ್ಬಿ ತಳಿ ಕ್ವಿಂಟಾಲ್ಗೆ 6389ರಿಂದ 76699 ರೂಪಾಯಿವರೆಗೆ ಮಾರಾಟವಾಗಿದೆ.