ನವದೆಹಲಿ: ನವೆಂಬರ್ 20ರಿಂದ 22ರವರೆಗೆ ನವದೆಹಲಿಯಲ್ಲಿ ನಡೆಯಲಿರುವ ಶಾಂಘೈ ಸಹಕಾರ ಸಂಘಟನೆಯ(ಎಸ್ಸಿಓ) ಮೊದಲ 'ನಾಗರಿಕತಾ ಸಂವಾದ ವೇದಿಕೆ'ಯನ್ನು ಭಾರತ ಆಯೋಜಿಸಲಿದ್ದು, ಪಾಕಿಸ್ತಾನದ ರಾಷ್ಟ್ರೀಯ ಪ. ದೆಹಲಿಯ 16ನೇ ಶತಮಾನದ ಕೋಟೆಯಾದ 'ಪುರಾಣ ಕಿಲಾ'ದಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಲಿದ್ದಾರೆ. ಮತ್ತು 25ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳನ್ನು ಭಾಗವಹಿಸಲಿದ್ದಾರೆ ಎನ್ನಲಾಗಿದೆ.ಕೇಂದ್ರ ಸಂಸ್ಕೃತಿ ಸಚಿವಾಲಯವು, ವಿದೇಶಾಂಗ ಸಚಿವಾಲಯದೊಂದಿಗೆ ಜಂಟಿಯಾಗಿ ಈ ಕಾರ್ಯಕ್ರಮ ಆಯೋಜಿಸುತ್ತಿದೆ. 2025ರಲ್ಲಿ ಟಿಯಾಂಜಿನ್ನಲ್ಲಿ ನಡೆದ SCO ನಾಯಕರ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಈ ವೇದಿಕೆಯನ್ನು ಪ್ರಸ್ತಾಪಿಸಿದ್ದರು. ಬಳಿಕ ಸಂಘಟನೆ ಇದನ್ನು ಅಳವಡಿಸಿಕೊಂಡಿದೆ..