ಶೈನ್ ಶೆಟ್ಟಿ, ತನ್ವಿ ರಾಮ್, ಕೃತಿ ಮುಂತಾದವರು ನಟಿಸಿರುವ ‘ಶಂಕರಾಭರಣ’ ಸಿನಿಮಾದ ಪ್ರಚಾರವನ್ನು ರಾಜ್ಯಾದ್ಯಂತ ಮಾಡಲಾಗುತ್ತಿದೆ. ಶೈನ್ ಶೆಟ್ಟಿ ಅವರು ಬಸ್ ಓಡಿಸುವ ಮೂಲಕ ಹಲವು ಜಿಲ್ಲೆಗಳಿಗೆ ಭೇಟಿ ನೀಡುತ್ತಿದ್ದಾರೆ. ಈ ಚಿತ್ರತಂಡಕ್ಕೆ ರಾಜ್ ಬಿ. ಶೆಟ್ಟಿ ಅವರು ಸಹ ಬೆಂಬಲ ಸೂಚಿಸಿದ್ದಾರೆ. ಬಿಗ್ ಬಾಸ್ ಖ್ಯಾತಿಯ ನಟ ಶೈನ್ ಶೆಟ್ಟಿ ಅವರು ನಟಿಸಿರುವ ‘ಶಂಕರಾಭರಣ’ ಸಿನಿಮಾ ಈಗ ಬಿಡುಗಡೆಗೆ ಸಜ್ಜಾಗಿದೆ. ಪೋಸ್ಟರ್ ಮತ್ತು ಹಾಡುಗಳ ಮೂಲಕ ಈ ಸಿನಿಮಾ ಈಗಾಗಲೇ ಗಮನ ಸೆಳೆಯುತ್ತಿದೆ. ಈ ಸಿನಿಮಾದ ಕಥೆ ವಿಭಿನ್ನವಾಗಿರುವುದು ಮಾತ್ರವಲ್ಲದೇ ಪ್ರಚಾರ ಕಾರ್ಯ ಕೂಡ ಡಿಫರೆಂಟ್ ಆಗಿಯೇ ಸಾಗುತ್ತಿದೆ.