ಕಮಲನಗರ: ತಾಲೂಕಿನ ಖೇಡ-ಸಂಗಮ ಗ್ರಾಮದ ಚನ್ನಬಸವ ಪಟ್ಟದ್ದೇವರ ಗುರುಕುಲ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸಲಾಯಿತು. ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಶಾಲೆಯ. ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಶಾಲೆಯ ಮುಖ್ಯಶಿಕ್ಷಕ ಸಂಜಯಕುಮಾರ ಮೆಂಗಾ ಪೂಜೆ ಸಲ್ಲಿಸಿ ಮಾತನಾಡಿ, ರಾಮಾಯಣ ಮಹಾಕಾವ್ಯ ರಚಿಸಿದವರು ಮಹರ್ಷಿ ವಾಲ್ಮೀಕಿಯವರು. ಅವರು ರಾಮಾಯಣದಲ್ಲಿ ಉಲ್ಲೇಖಿಸಿರುವ ಅಂಶಗಳು ಇಂದಿಗೂ ಎಂದೆಂದಿಗೂ ಪ್ರಸ್ತುತವಾಗಿವೆ. ಆದಿಕವಿ ಹೇಳಿಕೊಟ್ಟ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.ಶಿಕ್ಷಕರಾದ ಶಿವಕುಮಾರ ಸ್ವಾಮಿ, ಲಕ್ಷ್ಮಣ.ಎಚ್., ಬಸವರಾಜ ಚಿಂದೆ, ಸುರೇಶ ನೀಲಮಠ, ಅನಿಲ ಬೆಳಕೆಟ್ಟೆ, ರತ್ನಮ್ಮ ಚಿಂದೆ, ಜ್ಯೋತಿ ನೀಲಮಠ ಇತರರಿದ್ದರು.