ಹುಮನಾಬಾದ್: ಗುರುಗಳು ನಮಗೆ ವಿದ್ಯೆಯ ಜತೆಗೆ ಸಂಸ್ಕಾರ ನೀಡಿ ಬದುಕಿನ ಭವಿಷ್ಯವನ್ನು ರೂಪಿಸಿದ ಶಿಲ್ಪಿಗಳಾಗಿದ್ದಾರೆ. ನಾವು ಇಂದು ಜೀವನದಲ್ಲಿ ಈ ಮಟ್ಟಕ್ಕೆ ಬೆಳೆಯಲು ಶಾಲೆಯಲ್ಲಿ ಶಿಕ್ಷಣ ನೀಡಿದ. ಚರ್ಮರೋಗ ತಜ್ಞ ಹಾಗೂ ಶಾಲೆಯ ಹಳೆಯ ವಿದ್ಯಾರ್ಥಿ ಡಾ. ನಿವೃತ್ತ ಶಿಕ್ಷಕಿಯರಾದ ಹಾಲಮ್ಮ, ಸುಕನ್ಯಾ, ಸುಶೀಲಾಬಾಯಿ, ಲಕ್ಷಿ$್ಮಬಾಯಿ ಇಜಾರೆ, ಶಿಕ್ಷಕರಾದ ಮಹದೇವಪ್ಪ ಇಜಾರೆವ, ಇಬ್ರಾಹಿಂ ಅವರನ್ನು ಹಳೆಯ ವಿದ್ಯಾರ್ಥಿಗಳು ಸನ್ಮಾನಿಸಿ ಗೌರವಿಸಿದರು. ಹಳೆಯ ವಿದ್ಯಾರ್ಥಿಗಳಾದ ಸರಕಾರಿ ಪ್ರೌಢ ಶಾಲೆ ಶಿಕ್ಷಕರ ಸಂಘದ ರಾಜ್ಯ ಪರಿಷತ್ ಸದಸ್ಯ ಸುಭಾಷ ಗಂಗಾ, ವಿನೋದ ಕೋಟೆ, ವೈಜನಾಥ ಕಟ್ಟಿಮನಿ, ಅನಿಲ ಕುಡ್ತೆ ಸೇರಿ ಹಲವರು ತಮ್ಮ ಬಾಲ್ಯದ ಸವಿ ನೆನಪುಗಳನ್ನು ಹಂಚಿಕೊಂಡರು.