ಮುಂಬೈ: ಬಾಲಿವುಡ್ ಹಾಗೂ ದಕ್ಷಿಣ ಭಾರತದ ಸಿನಿರಂಗದಲ್ಲಿ ತಮ್ಮ ನೈಜ ಅಭಿನಯ ಮತ್ತು ದಿಟ್ಟ ನಿಲುವುಗಳಿಂದಲೇ ಹೆಸರುವಾಸಿಯಾಗಿರುವ ನಟಿ ರಾಧಿಕಾ ಆಪ್ಟೆ ( Radhika Apte ) ಇದೀಗ ಮತ್ತೊಮ್ಮೆ ಪ್ರಚಲಿ. ಚಿತ್ರರಂಗದ ಶೂಟಿಂಗ್ ಸೆಟ್ಗಳಲ್ಲಿ ಮಹಿಳಾ ಕಲಾವಿದರು ಒಂದೆಡೆ ಸೇರಿದರೆ ಅವರ ನಡುವೆ ಜಗಳ, ಈರ್ಷೆ ಅಥವಾ ಮನಸ್ತಾಪಗಳು ಉಂಟಾಗುತ್ತವೆ ಎಂಬ ಸಮಾಜದ ಹಳೆಯ ಕಲ್ಪನೆಯನ್ನು ಅವರು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. ಇತ್ತೀಚಿನ ಖಾಸಗಿ ಸಂದರ್ಶನವೊಂದರಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಹಿಳೆಯರ ನಡುವಿನ ಸೌಹಾರ್ದತೆ ಮತ್ತು ಪುರುಷರಲ್ಲಿ ಕಂಡುಬರುವ ಅಭದ್ರತೆಯ ಕುರಿತು ಅತ್ಯಂತ ನೇರ ಹಾಗೂ ಸ್ಪಷ್ಟ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ..ಅಂದು ಹೊಟ್ಟೆ ತೋರಿಸಿದ್ದಕ್ಕೆ ಕೇಸ್ ಹಾಕಿದ್ದ ನಜ್ರಿಯಾಗೆ ಇಂದು ಏನಾಯ್ತು?