ಮೈಸೂರು ದಸರಾ ಕುರಿತು ರಾಜವಂಶಸ್ಥೆ ಪ್ರಮೋದಾದೇವಿ ಅವರ ಅಸಮಾಧಾನಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ. ದಸರಾ ನಾಡಹಬ್ಬವಾಗಿದ್ದು, ಸರ್ಕಾರದಿಂದ ಯಾವುದೇ ಲೋಪವಾಗಿದ್ದರೆ ಸರಿಪಡಿಸಿಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ. ಇದು ನನ್ನ, ಪ್ರಮೋದಾ ದೇವಿ ವಿಚಾರ ಅಲ್ಲ, ರಾಜ್ಯದ ವಿಚಾರ. ನನಗೆ ಇತಿಹಾಸ ಗೊತ್ತಿಲ್ಲ ಪರಂಪರೆಯಂತೆ ಮಾಡಿದ್ದೇವೆ ಎಂದವರು ಹೇಳಿದ್ದಾರೆ. ಬೆಳಗಾವಿ, ಅಕ್ಟೋಬರ್ 27: ಮೈಸೂರು ದಸರಾ ಬಗ್ಗೆ ಪ್ರಮೋದಾದೇವಿ ಅಸಮಾಧಾನ ವಿಚಾರ ಸಮಭಂಧ ಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ. ಆದರೆ ಮೊದಲಿನಿಂದಲೂ ಏನು ಪದ್ಧತಿ ಇದೆಯೋ ಅದೇ ರೀತಿ ಆಚರಣೆ ಮಾಡಿದ್ದೇವೆ. ಪ್ರಮೋದಾದೇವಿ ಏನು ಹೇಳಿದ್ದಾರೆ ಗಮನಿಸಿ ಚರ್ಚೆ ಮಾಡ್ತೇನೆ. ಈ ಬಾರಿ ದಸರಾದಲ್ಲಿ ಪ್ರಶಾಂತ ಆನೆ ಅಂಬಾರಿ ಹೊತ್ತಿದ್ದಾನೆ.