ಕಿರಣ್ ಮತ್ತು ಪುನೀತ್ ಅವರಿಬ್ಬರ ವಿಚಾರಣೆಯನ್ನು ಇಂದು ನ್ಯಾಯಾಲಯದಲ್ಲಿ ಮಾಡಬೇಕಿತ್ತು. ಆದರೆ ಪುನೀತ್ ಅವರು ವಿಚಾರಣೆಗೆ ಗೈರಾಗಿದ್ದಾರೆ. ಈ ಹಿಂದೆಯೇ ಇವರು ಚಾರ್ಜ್ ಶೀಟ್ ಭಾಗವಾಗಿ ಸಿಆರ್ ಪಿಸಿ 164 ಅಡಿಯಲ್ಲಿ ನ್ಯಾಯಾಧೀಶರ ಎದುರು ಹೇಳಿಕೆ ದಾಖಲು ಮಾಡಿದ್ದಾರೆ ಆದರೆ ಇಂದು ನ್ಯಾಯಾಲಯದಲ್ಲಿ ಇಬ್ಬರೂ ಹೇಳಿಕೆ ದಾಖಲಿಸಬೇಕಿತ್ತು. ಎಸ್ಪಿಪಿ ಅವರು ಇವರ ವಿಚಾರಣೆ ನಡೆಸಲಿದ್ದರು. ಆದರೆ ವಿಚಾರಣೆಗೆ ಪುನೀತ್ ಗೈರಾಗಿದ್ದಾರೆ. ರೇಣುಕಾ ಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ಬಿರುಸಿನಿಂದ ನಡೆಯುತ್ತಿದೆ. ಇಂದು (ಅಕ್ಟೋಬರ್ 27) ಇಬ್ಬರು ಪ್ರತ್ಯಕ್ಷ ಸಾಕ್ಷಿಗಳ ವಿಚಾರಣೆಯನ್ನು ನಡೆಸಬೇಕಿತ್ತು. ಪುನೀತ್, ಡಿ ಕಂಪೆನಿ ಫ್ಯಾನ್ ಪೇಜಿನ ಅಡ್ಮಿನ್ ಎನ್ನಲಾಗಿದ್ದು, ದರ್ಶನ್ಗೆ ಆಪ್ತರಾಗಿದ್ದರು.