ದರ್ಶನ್-ಧನ್ವೀರ್ ಭೇಟಿ.. ಕುತೂಹಲ ಕೆರಳಿಸಿದ ಕೂಚಿಕೂ ಭೇಟಿ! Darshan Thoogudeepa-Dhanveer Gowda Meet: ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ನಟ ದರ್ಶನ್ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರುವುದು ಗೊತ್ತೇ ಇದೆ. ಇಂದು, 28 ಜುಲೈ 2026ರಂದು ನಟ ದರ್ಶನ್ ಆಪ್ತ ಸ್ನೇಹಿತ, ಸ್ಯಾಂಡಲ್ವುಡ್ ನಟ ಧನ್ವೀರ್ ಗೌಡ ಅವರು ಜೈಲಿಗೆ ಹೋಗಿ ನಟ ದರ್ಶನ್ ಅವರನ್ನು ಭೇಟಿಯಾಗಿ ಬಂದಿದ್ದಾರೆ. ಈ ಮೊದಲು ಕೂಡ ಧನ್ವೀರ್ ಅವರು ದರ್ಶನ್ ಅವರನ್ನು ಭೇಟಿಯಾಗಿ ಬಂದಿದ್ದರು. ಇಂದಿನ ಭೇಟಿಯಲ್ಲಿ ನಡೆದ ಮಾತುಕತೆ ಏನು? ನಟ ಹಾಗೂ ತಮ್ಮ ಆಪ್ತ ದರ್ಶನ್ ಅವರನ್ನು ಭೇಟಿಯಾಗಲು ಇಂದು ನಟ ಧನ್ವೀರ್ ಗೌಡ ಅವರು ಒಂಟಿಯಾಗಿಯೇ ಬಂದಿದ್ದಾರೆ.