ಬೆಂಗಳೂರಿನಲ್ಲಿ ಮಳೆ ಹೆಚ್ಚಾದಂತೆ ಮಕ್ಕಳಲ್ಲಿ ಡೆಂಗ್ಯೂ, ವೈರಲ್ ಜ್ವರ, ಶೀತ, ಕೆಮ್ಮಿನಂತಹ ಸಾಂಕ್ರಾಮಿಕ ರೋಗಗಳು ಹೆಚ್ಚಾಗಿವೆ. ಮಳೆ ನೀರು ನಿಂತು ಸೊಳ್ಳೆಗಳ ಉತ್ಪತ್ತಿಯಿಂದ ಡೆಂಗ್ಯೂ ಪ್ರಕರಣಗಳು ಏರಿಕೆ ಆಗಿವೆ. ಹೀಗಾಗಿ ಮಕ್ಕಳ ಆರೋಗ್ಯದ ಬಗ್ಗೆ ಜಾಗೃತಿ ವಹಿಸುವಂತೆ ತಜ್ಞರು ಸಲಹೆ ನೀಡಿದ್ದಾರೆ. ಬೆಂಗಳೂರು, ಅಕ್ಟೋಬರ್ 26: ಬೆಂಗಳೂರಿನಲ್ಲಿ ಯಾವ ಘಳಿಗೆಯಲ್ಲಿ ಮಳೆ ಬರುತ್ತೋ, ಬಿಸಿಲು ಬರುತ್ತೋ ಗೊತ್ತಿಲ್ಲ. ಆದರೆ ಬದಲಾಗುತ್ತಿರುವ ಈ ಹವಮಾನದಿಂದ ಪೋಷಕರು ಮಾತ್ರ ತಮ್ಮ ಮಕ್ಕಳ ಬಗ್ಗೆ ಎಚ್ಚರ ವಹಿಸಲೇಬೇಕಾಗಿದೆ. ಏಕೆಂದರೆ ನಗರದಲ್ಲಿ ಮಳೆ ಶುರುವಾದ ಬೆನ್ನಲ್ಲೇ ಇದೀಗ ಸಾಂಕ್ರಾಮಿಕ ಖಾಯಿಲೆಗಳ ಸಮಸ್ಯೆ ಶುರುವಾಗಿದೆ.