ನಟ ಧನ್ವೀರ್ ಗೌಡ ಹಾಗೂ ದರ್ಶನ್ ಪತ್ನಿ ವಿಜಯಲಕ್ಷ್ಮಿ ನಡುವೆ ಯಾವ ಕಾರಣಕ್ಕಾಗಿ ಮನಸ್ತಾಪ ಆಗಿದೆ ಎಂಬುದು ಆರಂಭದಲ್ಲಿ ಸ್ಪಷ್ಟವಾಗಿರಲಿಲ್ಲ. ಹಣದ ವಿಚಾರಕ್ಕಾಗಿ ಕಿರಿಕ್ ಆಗಿಲ್ಲ ಎಂದು ಹೇಳಲಾಗಿತ್ತು. ಆದರೆ ಈಗ ಒಂದು ಆಡಿಯೋ ವೈರಲ್ ಆಗಿದೆ. ಅದರಲ್ಲಿ ಧನ್ವೀರ್ ಅವರೇ ಹಣದ ಬಗ್ಗೆ ಮಾತನಾಡಿದ್ದಾರೆ ಎನ್ನಲಾಗಿದೆ. ವೈರಲ್ ಆಡಿಯೋದಲ್ಲಿ ಪ್ರಸ್ತಾಪ ಆಗಿರುವುದನ್ನು ಗಮನಿಸಿದರೆ ಮನಸ್ತಾಪಕ್ಕೆ ಹಣದ ವಿಷಯವೇ ಕಾರಣ ಎಂಬುದು ಸ್ಪಷ್ಟವಾಗಿದೆ. ‘ಅವರು ಫೋನ್ ಮಾಡಿ ದುಡ್ಡು ಕೇಳಿದರೆ ಬಾಗಿಲಿಗೆ ಎಸೆದು ಬರುತ್ತೇನೆ. ನಾನು ಯಾರ ಮನೆಯ ಜೀತದ ಆಳು ಅಲ್ಲ.