ಕ್ಯಾಪ್ಟನ್ ಆಗಿರುವ ಸೌಂದರ್ಯಾ ಶೆಟ್ಟಿ ಅವರು ನೇರವಾಗಿ ಈ ಮಾತುಗಳನ್ನು ಹೇಳಿದ್ದಾರೆ. ಗಗನ್ ಮೋಸಗಾರ, ಕುಮಾರಿ ವೇಸ್ಟ್ ಪೀಸ್, ಧನುಷ್ ಬಕೆಟ್, ಪ್ರಶಾಂತ್ ಊಸರವಳ್ಳಿ ಎಂದು ಅವರು ಟ್ಯಾಗ್ ನೀಡಿದ್ದಾರೆ. ತಮ್ಮನ್ನು ವೇಸ್ಟ್ ಪೀಸ್ ಎಂದು ಕರೆದಿದ್ದಕ್ಕೆ ಕುಮಾರಿ ಬೇಸರ ಮಾಡಿಕೊಂಡು ಕೂಗಾಡಿದ್ದಾರೆ. ‘ಬಿಗ್ ಬಾಸ್ ಕನ್ನಡ ಸೀಸನ್ 13’ ಶೋನಲ್ಲಿ 50 ದಿನಗಳು ಕಳೆದಿವೆ. ಈ ವಾರದ ಆರಂಭದಲ್ಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಒಂದು ಟಾಸ್ಕ್ ನೀಡಲಾಗಿತ್ತು. ಕೆಲವು ನಿಷ್ಠುರವಾದ ಟ್ಯಾಗ್ಗಳ ಮೂಲಕ ಸ್ಪರ್ಧಿಗಳನ್ನು ಗುರುತಿಸುವಂತೆ ಕ್ಯಾಪ್ಟನ್ ಸೌಂದರ್ಯಾ ಶೆಟ್ಟಿ ಅವರಿಗೆ ಸೂಚನೆ ನೀಡಲಾಯಿತು.