ಮತದಾರರ ಚೀಟಿ ಪ್ರಮುಖ ಗುರುತಿನ ದಾಖಲೆಗಳಲ್ಲಿ ಒಂದು. ಇದರಲ್ಲಿರುವ ವಿವರಗಳಲ್ಲಿ ಏನಾದ್ರೂ ತಪ್ಪಿದ್ರೆ ಅದನ್ನು ಸರಿಪಡಿಸಿಕೊಳ್ಳುವುದು ಬಹಳ ಮುಖ್ಯ. ಒಂದೇ ಒಂದು ರೂಪಾಯಿ ಖರ್ಚಿಲ್ಲದೇ ಈ ವೋಟರ್ ಐಡಿಯಲ್ಲಿ ತಿದ್ದುಪಡಿ ಮಾಡಬಹುದು. ಹೌದು, ಈ ತಿದ್ದುಪಡಿಗೆ ದಾಖಲೆಗಳಾದ ಆಧಾರ್ ಕಾರ್ಡ್, ಜನ್ಮ ದಿನಾಂಕ ಪ್ರಮಾಣಪತ್ರ, ವಿಳಾಸದ ಪುರಾವೆಗಳು ನಿಮ್ಮ ಬಳಿಯಿರಬೇಕು. ಈ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ. ಭಾರತದ ಚುನಾವಣಾ ಆಯೋಗದಿಂದ 18 ವರ್ಷ ಮೇಲ್ಪಟ್ಟ ಭಾರತೀಯ ನಾಗರಿಕರಿಗೆ ನೀಡುವ ಈ ಮತದಾರರ ಗುರುತಿನ ಚೀಟಿಯೂ ಅಧಿಕೃತ ಗುರುತಿನ ದಾಖಲೆಯಾಗಿದೆ. ಇದು ದಾಖಲೆ ಮಾತ್ರವಲ್ಲ, ಭಾರತೀಯನೆಂಬ ಅಧಿಕೃತ ಗುರುತು ಇದಾಗಿದೆ.