After 30: ಪ್ರಸ್ತುತ ಕಾಲಘಟ್ಟದಲ್ಲಿ ಜನರು ತಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ದೊಡ್ಡ ವಿಷಯ ಹಾಗೂ ಸವಾಲಾಗಿ ಪರಿಣಮಿಸಿದೆ. ಆಹಾರ ಕ್ರಮ, ವ್ಯಾಯಾಮ ಮತ್ತು ರೂಢಿಸಿಕೊಂಡಿರುವ ಜೀವನಶೈಲಿ ನಮ್ಮ ಆರೋಗ. ಆದರೆ, ಈ ಬಗ್ಗೆ ಮೊದಲ ಹಂತದಲ್ಲಿ ತಲೆಕಡಿಸಿಕೊಳ್ಳದೆ ಸಾಗುವ ನಾವು, ಆಸ್ಪತ್ರೆ ಅಲೆಯುವ ಪರಿಸ್ಥಿತಿ ಎದುರಾದಾಗ ಅಯ್ಯೋ ಹೀಗಾಯ್ತಲ್ಲ ಎಂದು ಚಿಂತಿಸುತ್ತೇವೆ.ಮಾನವನ ಜೀವಿತಾವಧಿ ಬಹಳಷ್ಟು ಕುಸಿದಿದೆ. ಹೀಗಾಗಿ, ಆಹಾರದ ವಿಷಯದಲ್ಲಿ ನಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಅತ್ಯವಶ್ಯಕ. ಈಗ, ಮೂವತ್ತು ವರ್ಷ ವಯಸ್ಸಿನಲ್ಲಿ ಅನೇಕ ರೀತಿಯ ರೋಗಗಳು ಆವರಿಸಿಕೊಳ್ಳುತ್ತಿವೆ. ಆದರೆ, ಪ್ರತ್ಯೇಕವಾಗಿ 30 ವರ್ಷ ದಾಟಿದವರಲ್ಲಿ ಕೆಲವು ಸಮಸ್ಯೆಗಳು ಗೋಚರಿಸುತ್ತ ಹೋಗುತ್ತದೆ.