ಬಾಲಿವುಡ್ ನಟ ಆಮಿರ್ ಖಾನ್ ಗೌರಿ ಸ್ಪ್ರಾಟ್ ಅವರನ್ನು ಮೂರನೇ ಮದುವೆಯಾದ ಬೆನ್ನಲ್ಲೇ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನಿಂದ ಬೆದರಿಕೆ ಎದುರಿಸುತ್ತಿದ್ದಾರೆ. ಬಾಲಿವುಡ್ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮಿರ್ ಖಾನ್ ಅವರ ಜೀವನದಲ್ಲಿ ಹೊಸ ಸಂಚಲನ ಶುರುವಾಗಿದೆ. ಗೌರಿ ಸ್ಪ್ರಾಟ್ ಅವರೊಂದಿಗಿನ ಮೂರನೇ ಮದುವೆಯ ಬೆನ್ನಲ್ಲೇ ಅವರಿಗೆ ಹೊಸ ಸಂಕಷ್ಟ ಎದುರಾಗಿದೆ. ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನಿಂದ ಬೆದರಿಕೆ ಕರೆಗಳು ಬಂದಿವೆ ಎನ್ನಲಾಗಿದೆ. ಈ ಘಟನೆಯು ಸಂಪೂರ್ಣ ಸಿನಿರಂಗದಲ್ಲಿ ಆತಂಕದ ವಾತಾವರಣ ಸೃಷ್ಟಿಸಿದೆ. ಅರ್ಜು ಬಿಷ್ಣೋಯ್ ಮತ್ತು ಟೈಸನ್ ಬಿಷ್ಣೋಯ್ ಹೆಸರಿನಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಆಡಿಯೋ ಮೆಸೇಜ್ ಹರಿದಾಡುತ್ತಿದೆ. ಆಮಿರ್ ಖಾನ್ 'ಲವ್ ಜಿಹಾದ್' ಉತ್ತೇಜಿಸುತ್ತಿದ್ದಾರೆ ಎಂದು ಈ ಸಂದೇಶದಲ್ಲಿ ಆರೋಪಿಸಲಾಗಿದೆ.